ಹಿಂದೂ ಮಹಾಸಾಗರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನೌಕಾಧಿಕಾರಿ ಕೊನೆಗೂ ರಕ್ಷಣೆ

ಸೈಲ್ಲಿಂಗ್ ರೇಸ್ ನಿಂದ ಗಾಯಗೊಂಡು ಆಸ್ಟ್ರೇಲಿಯಾ ಹತ್ತಿರ ಹಿಂದೂ ಮಹಾಸಾಗರದಲ್ಲಿ ಸಂಕಷ್ಟದಲ್ಲಿ ಸಿಲುಕಿದ ಭಾರತೀಯ ನೌಕ ಅಧಿಕಾರಿಯನ್ನು ಫ್ರೆಂಚ್ ಹಡಗೊಂದು ರಕ್ಷಿಸಿದೆ 16 ತಾಸುಗಳಲ್ಲೇ ರಕ್ಷಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ನೌಕಾ ರೇಸ್ ನಲ್ಲಿ ಪಾಲ್ಗೊಂಡು ಅಪಾಯಕ್ಕೆ ಸಿಲುಕಿದ್ದ ಭಾರತದ ನೌಕಾಧಿಕಾರಿ ಅಭಿಲಾಶ್ ಟಾಮಿ ಅವರನ್ನು ಕೊನೆಗೂ ರಕ್ಷಣೆ ಮಾಡಲಾಗಿದೆ.

ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಆಯೋಜನೆಯಾಗಿದ್ದ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ನೌಕಾ ರೇಸ್ ನಲ್ಲಿ ಪಾಲ್ಗೊಂಡಿದ್ದ ಅಧಿಕಾರಿ ಅಭಿಲಾಶ್ ಟಾಮಿ, ಚಂಡಮಾರುತದ ಹೊಡೆತಕ್ಕೆ ಸಿಲುಕಿ ಪ್ರಾಣಾಪಾಯಕ್ಕೆ ಸಿಲುಕಿದ್ದರು. ಅವರ ಚಲಾಯಿಸುತ್ತಿದ್ದ ಬೋಟ್ ಸಮುದ್ರ ಮಧ್ಯೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಛಿದ್ರವಾಗಿತ್ತು. ಕೂಡಲೇ ಟಾಮಿ ಅಪಾಯದ ಸೂಚನೆ ರವಾನಿಸಿದ್ದರು. ಇದರಿಂದ ಎಚ್ಚೆತ್ತ ನೌಕಾಧಿಕಾರಿಗಲು ಅಭಿಲಾಶ್ ಟಾಮಿ ರಕ್ಷಣೆಗೆ ಕಾರ್ಯಾಚರಣೆ ಕೈಗೊಂಡಿದ್ದರು. ಟಾಮಿ ರಕ್ಷಣೆಗಾಗಿ ಭಾರತೀಯ ನೌಕಾದಳದ ನೌಕೆ ಮತ್ತು ಪಿ8ಐ ವಿಮಾನವನ್ನು ರವಾನೆ ಮಾಡಲಾಗಿತ್ತು. ಇದೀಗ ಬರೊಬ್ಬರಿ 16 ಗಂಟೆಗಳ ಬಳಿಕ ಟಾಮಿ ರಕ್ಷಣೆ ಮಾಡಲಾಗಿದ್ದು, ಛಿದ್ರಗೊಂಡ ಬೋಟ್ ನಲ್ಲಿ ಟಾಮಿ ಪ್ರಜ್ಞಾ ಸ್ಥಿತಿಯಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಅವರನ್ನು ಫ್ರೆಂಚ್ ನೌಕಾದಳ ನೌಕೆ ಓಸಿರಿಸಿಗೆ ರವಾನೆ ಮಾಡಲಾಗಿದ್ದು, ಅಲ್ಲಿಯೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಶೀಘ್ರ ಅವರು ದಡಕ್ಕೆ ಬಂದ ಬಳಿಕ ಅವರನ್ನು ಆಸ್ಪತ್ರೆಗೆ ರವಾನೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಅಬಿಲಾಶ್ ಟಾಮಿ ಪ್ರಯಾಣಿಸುತ್ತಿದ್ದ ನೌಕಾ ದಳದ ನೌಕೆ ಎಸ್ ವಿ ಥುರಿಯಾ ಚಂಡಮಾರುತ ಮತ್ತು ಭಾರಿ ಅಲೆಗಳ ಏಟಿಗೆ ಛಿದ್ರವಾಗಿತ್ತು. 10 ರಿಂದ15 ಅಡಿಗಳಷ್ಟು ಮೇಲೆದ್ದಿದ್ದ ಅಲೆಗಳು ಬೋಟ್ ನ ಮೇಲೆ ದಾಳಿ ಮಾಡಿದ್ದವು. ಅಲ್ಲದೆ ವಾತಾವರಣ ಕೂಡ ಪ್ರತೀಕೂಲವಾಗಿದ್ದರಿಂದ ಬೋಟ್ ಕಾರ್ಯ ಸ್ಥಗಿತ ಮಾಡಿತ್ತು. ಕೂಡಲೇ ಅಪಾಯದ ಮುನ್ಸೂಚನೆ ಅರಿತಿದ್ದ ಟಾಮಿ ಅಪಾಯದ ಮುನ್ಸೂಚನೆ ರವಾನಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com