ಸುಶೀಲ್ ಮೋದಿ
ಸುಶೀಲ್ ಮೋದಿ

ಪಿತೃಪಕ್ಷದ ವೇಳೆ ಅಪರಾಧಗಳಿಂದ ದೂರವಿರಿ: ಕ್ರಿಮಿನಲ್ ಗಳಿಗೆ ಸುಶೀಲ್ ಮೋದಿ ಸಲಹೆ

ಪಿತೃಪಕ್ಷ ಅವಧಿಯಲ್ಲಿ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದೇ ಅನೈತಿಕ ಚಟುವಟಿಕೆಗಳಿಂದ ದೂರ ಇರುವಂತೆ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ...
Published on
ಗಯಾ: ಪಿತೃಪಕ್ಷ ಅವಧಿಯಲ್ಲಿ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದೇ ಅನೈತಿಕ ಚಟುವಟಿಕೆಗಳಿಂದ ದೂರ ಇರುವಂತೆ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಕರೆ ನೀಡಿದ್ದಾರೆ. 
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಶೀಲ್ ಮೋದಿ, ನಿಮಗೆ ಕೈ ಜೋಡಿಸಿ ಬೇಡಿಕೊಳ್ಳುತ್ತೇನೆ, ನೀವು ದಯಾ ಮಾಡಿ ಪಿತೃಪಕ್ಷದ ವೇಳೆ ಅಪರಾಧ ಪ್ರಕರಣಗಳಿಂದ ದೂರವಿರಿ. ಬೇರೆ ದಿನಗಳಲ್ಲಿ ನೀವು ಮತ್ತೊಬ್ಬರಿಗೆ ಏನಾದರೂ ಮಾಡುತ್ತಿರುವಿರಿ ಎಂದು ಹೇಳಿದ್ದಾರೆ.
ಭಾದ್ರಪದ ಮಾಸದ ಪೂರ್ಣಿಮೆಯ ನಂತರದ 16 ದಿನಗಳನ್ನು ಹಿಂದೂ ಕ್ಯಾಲೆಂಡರ್ ಪದ್ಧತಿಯ ಪ್ರಕಾರ ಪಿತೃಪಕ್ಷ ಎಂದು ಕರೆಯಲಾಗುತ್ತದೆ. ಈ ಅವದಿಯಲ್ಲಿ ಹಿಂದೂಗಳು ತಮ್ಮ ಪೂರ್ವಜರಿಗೆ  ವಿಶೇಷವಾದ ತಿಂಡಿ ತಿನಿಸು ಮಾಡುತ್ತಾರೆ. ಸೋಮವಾರ ಆರಂಭವಾಗಿರುವ ಪಿತೃಪಕ್ಷ ಅಕ್ಟೋಬರ್ 8ರ ವರೆಗೂ ಇರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com