1 ಸುಳ್ಳನ್ನು ಮುಚ್ಚಿಡಲು 1000 ಸುಳ್ಳುಹೇಳುವ ಬಿಜೆಪಿ: ರಾಫೆಲ್ ಡೀಲ್ ನಲ್ಲಿ ವಾಧ್ರಾಗೆ ಪಾಲು ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

ರಾಫೆಲ್ ಒಪ್ಪಂದದಲ್ಲಿ ರಾಬರ್ಟ್ ವಾಧ್ರಾ ಒಡೆತನದ ಸಂಸ್ಥೆಯು ಆಫ್ಸೆಟ್ ಪಾಲನ್ನು ಪಡೆದುಕೊಳ್ಳುವ ಉತ್ಸಾಹದಲ್ಲಿದೆ ಎಂಬ ಬಿಜೆಪಿ ಆರೋಪಕ್ಕೆ ಮಂಗಳವಾರ ಕಾಂಗ್ರೆಸ್ ಪಕ್ಷ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ರಂದೀಪ್ ಸುರ್ಜೆವಾಲಾ
ರಂದೀಪ್ ಸುರ್ಜೆವಾಲಾ
ನವದೆಹಲಿ: ರಾಫೆಲ್ ಒಪ್ಪಂದದಲ್ಲಿ ರಾಬರ್ಟ್ ವಾಧ್ರಾ ಒಡೆತನದ ಸಂಸ್ಥೆಯು ಆಫ್ಸೆಟ್ ಪಾಲನ್ನು ಪಡೆದುಕೊಳ್ಳುವ ಉತ್ಸಾಹದಲ್ಲಿದೆ ಎಂಬ ಬಿಜೆಪಿ ಆರೋಪಕ್ಕೆ  ಮಂಗಳವಾರ ಕಾಂಗ್ರೆಸ್ ಪಕ್ಷ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಕಾಂಗ್ರೆಸ್ ಪಕ್ಷದ ವಕ್ತಾರ ರಂದೀಪ್ ಸುರ್ಜೆವಾಲಾ ಅವರು, "ಈ (ರಾಫೆಲ್ ಜೆಟ್ ಒಪ್ಪಂದ) ಟೆಂಡರ್ ಪ್ರಾರಂಭವಾದಂದಿನಿಂದ ಬಿಜೆಪಿ ತಾನು ಒಂದು ಸುಳ್ಳನ್ನು ಮುಚ್ಚಿಡಲು  100 ಸುಳ್ಳುಗಳನ್ನು ಹೇಳುತ್ತಿದೆ. ಆಗಸ್ಟ್ 2007 ರಲ್ಲಿ ನಾವು ಟೆಂಡರ್ ಕರೆದಿದ್ದು ಅಂತರಾಷ್ಟ್ರೀಯ  ಸಂಸ್ಥೆಗಳ ಬುಇಡ್ ಗಳನ್ನು  ಡಿಸೆಂಬರ್ 12, 2012ರಂದು ತೆರೆಯಲಾಗಿತ್ತು ಹೊರತು 2008ರಲ್ಲಲ್ಲ ಎನ್ನುವ ಸತ್ಯವನ್ನು ನೀವು (ಬಿಜೆಪಿ) ಅರಿತುಕೊಳ್ಳಬೇಕು.
ಮಾರ್ಚ್ 13, 2014 ರಂದು ಯುಪಿಎ  ಸರ್ಕಾರವು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಯನ್ನು ಆಫ್ಸೆಟ್ ಪಾಲುದಾರನಾಗಿ ಮಾಡಿತು. ಇದನ್ನು ಡಸಾಲ್ಟ್  ಏವಿಯೇಷನ್ ​​ಎರಿಕ್ ಟ್ರಾಪಿಯರ್ ಸ್ಪಷ್ಟ ಮಾಡಿದೆ
ಆದರೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಅವರ ಅಳಿಯನ ಸಂಸ್ಥೆಯು ಒಪ್ಪಂದದ  'ಮಧ್ಯವರ್ತಿತ್ವ’ ವನ್ನು ಒಪ್ಪಿಕೊಳ್ಳದೆ ಹೋದ ಕಾರಣ ಕಾಂಗ್ರೆಸ್ ಪಕ್ಷವು ಒಪ್ಪಂದವನ್ನು ಕೈಬಿಟ್ಟಿದೆ ಎಂದು ಬಿಜೆಪಿ ಸೋಮವಾರ ಆರೋಪಿದೆ
2012 ರ ಡಿಸೆಂಬರ್ 12 ರಂದು ರಾಫೆಲ್ ಜೆಟ್ ಒಂದಕ್ಕೆ 526 ಕೋಟಿ ರೂ.ದರ ನೀಡಲು ಕಾಂಗ್ರೆಸ್ ಸಮ್ಮತಿಸಿತ್ತು. ಆದರೆ ಬಿಜೆಪಿ ಈ ಒಪ್ಪಂದ ರದ್ದುಗೊಳಿಸಿ ಅದೇ ಜೆಟ್ ಗಳಿಗೆ ಒಂದಕ್ಕೆ  1,670 ಕೋಟಿ ರೂ. ನೀಡಿ ಏಕೆ ಖರೀದಿಸಿದೆ? ಯುಪಿಎ  ಸರ್ಕಾರ ಈ ಹಿಂದೆ ಎಚ್ಎಎಲ್ ಅನ್ನು ಆಯ್ಕೆ ಮಾಡಿತ್ತು. ಆದರೆ, ಪ್ರಧಾನಿ ಮೋದಿ ಇದನ್ನು ಕೈಬಿಟ್ಟು ಖಾಸಗಿ ಆಫ್ಸೆಟ್  ಪಾಲುದಾರರನ್ನು ಆಯ್ಕೆ ಮಾಡಿದ್ದಾರೆ.ಇದು ಮೋದಿ ದೇಶದ ಪ್ರಧಾನಿಯಲ್ಲ ಬದಲಿಗೆ ಅಂಬಾನಿಯವರ ಪ್ರಧಾನಿ ಎನ್ನುವುದನ್ನು ಸಾಬೀತುಗೊಳಿಸಿದೆ ಎಂದು ಸುರ್ಜೆವಾಲಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com