ಕೇಂದ್ರ ಸರ್ಕಾರದಿಂದ ಆಮದು ಸುಂಕ ಹೆಚ್ಚಳ: ಎಸಿ, ಪ್ರಿಡ್ಜ್, ವಾಷಿಂಗ್ ಮೆಷಿನ್ ಬೆಲೆ ಏರಿಕೆ !

ಅನಗತ್ಯ ಸರಕುಗಳ ಆಮದು ತಡೆ ಉದ್ದೇಶದೊಂದಿಗೆ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಜೆಟ್ ಇಂಧನ, ಹವಾನಿಯಂತ್ರಕ, ರೆಪ್ರಿಜಿರೇಟರ್ ಸೇರಿದಂತೆ 19ಕ್ಕೂ ಹೆಚ್ಚು ವಸ್ತುಗಳ ಆಮದು ಸುಂಕವನ್ನು ಕೇಂದ್ರಸರ್ಕಾರ ಹೆಚ್ಚಳ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಅನಗತ್ಯ ಸರಕುಗಳ  ಆಮದು ತಡೆ ಉದ್ದೇಶದೊಂದಿಗೆ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಜೆಟ್  ಇಂಧನ, ಹವಾನಿಯಂತ್ರಕ,  ರೆಪ್ರಿಜಿರೇಟರ್ ಸೇರಿದಂತೆ 19ಕ್ಕೂ ಹೆಚ್ಚು ವಸ್ತುಗಳ  ಆಮದು ಸುಂಕವನ್ನು  ಕೇಂದ್ರಸರ್ಕಾರ ಹೆಚ್ಚಳ ಮಾಡಿದೆ.

ಕಳೆದ  ಆರ್ಥಿಕ ವರ್ಷದಲ್ಲಿ ಇಂತಹ ವಸ್ತುಗಳನ್ನು  ಹಡಗಿನ ಮೂಲಕ ದೇಶದೊಳಗೆ ತರಲು  ತಗುಲಿದ  ಒಟ್ಟಾರೇ, ಆಮದು ವೆಚ್ಚ   86 ಸಾವಿರ ಕೋಟಿ ರೂ. ಆಗಿತ್ತು ಎಂದು  ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ವಾಷಿಂಗ್  ಮಿಷಿನ್,  ಸ್ಪೀಕರ್ಸ್, ರಾಡಿಕಲ್ ಕಾರ್ ಟೈರ್ಸ್,  ಆಭರಣ ವಸ್ತುಗಳು, ಕಿಚ್ಚನ್ ಮತ್ತು ಟೇಬಲ್ ಬಟ್ಟೆ, ಸೂಟ್ ಕೇಷ್ ಮತ್ತಿತರ ಸರಕುಗಳ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ.

ಇಂತಹ ವಸ್ತುಗಳ ಆಮದು ತಡೆಗಟ್ಟುವ ಉದ್ದೇಶದಿಂದ ಕೇಂದ್ರಸರ್ಕಾರ ಆಮದು ಸುಂಕ ಹೆಚ್ಚಿಸಿದೆ. ಇದರಿಂದಾಗಿ ವಿತ್ತೀಯ ಕೊರತೆ ಸುಧಾರಿಸಲಿದ್ದು, 19 ವಸ್ತುಗಳ ಆಮದು ಸುಂಕವನ್ನು ಹೆಚ್ಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಎಸಿ, ರೆಪ್ರಿಜಿರೇಟರ್ ಮತ್ತು ವಾಷಿಂಗ್  ಮಿಷನ್ ಗೆ ದುಪಟ್ಟು ಶೇ, 20 ರಷ್ಟು ಆಮದು ಸುಂಕ ವಿಧಿಸಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಈ ವಸ್ತುಗಳ ಬೆಲೆಯಲ್ಲಿ ಬದಲಾವಣೆಯಾಗಲಿದೆ.

ವಿದೇಶಿ ವಿನಿಮಯ ಒಳ ಹಾಗೂ ಹೊರ ಹರಿವಿನಲ್ಲಿ ಬದಲಾವಣೆಯಾಗಿದ್ದು, ಏಪ್ರಿಲ್- ಜೂನ್  ಮಧ್ಯಭಾಗದಲ್ಲಿ ಶೇ.2.4 ರಷ್ಟು ಜೆಡಿಪಿ ವಿಸ್ತರಣೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com