ಸೆಕ್ಷನ್ 57 ರದ್ದುಗೊಳಿಸಿರುವುದರಿಂದ ಟೆಲೆಕಾಂ ಕಂಪನಿಗಳು, ಇ-ಕಾಮರ್ಸ್ ಸಂಸ್ಥೆಗಳು ಮತ್ತು ಎಲ್ಲಾ ಬ್ಯಾಂಕ್ ಗಳು ಸೇರಿದಂತೆ ಯಾವುದೇ ಖಾಸಗಿ ಸಂಸ್ಥೆ ಆಧಾರ್ ಬಯೋಮೆಟ್ರಿಕ್ ಮಾಹಿತಿ ಅಥವಾ ಡೇಟಾ ಹೊಂದುವಂತಿಲ್ಲ ಮತ್ತು ಅದನ್ನು ಕೇಳುವಂತಿಲ್ಲ. ಆದರೆ ಖಾಸಗಿ ಕಂಪನಿಗಳು ಈಗಾಗಲೇ ತಮ್ಮ ಬಳಿ ಆಧಾರ್ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಅಥವಾ ಅದನ್ನು ಮಾರಾಟ ಮಾಡುವುದಿಲ್ಲ ಎಂಬದನ್ನು ಖಚಿತಪಡಿಸಿಕೊಳ್ಳುವುದು ಹೇಗೆ? ಎಂದು ಸೈಬರ್ ಕಾನೂನು ತಜ್ಞ ಪವನ್ ದಗ್ಗಲ್ ಅವರು ಪ್ರಶ್ನಿಸಿದ್ದಾರೆ.