'ವರ್ಲ್ಡ್ ಬುಕ್ ಆಫ್ ರೆಕಾರ್ಡ್' ಗೆ ಸೇರಿದ ಬಿಜೆಪಿಯ ಭೋಪಾಲ್ ಸಮ್ಮೇಳನ!

ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ್ದ ಕಾರ್ಮಿಕರ ಬೃಹತ್ ಸಮ್ಮೇಳನ ಪ್ರತಿಷ್ಠಿತ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿದೆ.
'ವರ್ಲ್ಡ್ ಬುಕ್ ಆಫ್ ರೆಕಾರ್ಡ್' ಗೆ ಸೇರಿದ ಬಿಜೆಪಿಯ ಭೋಪಾಲ್ ಸಮ್ಮೇಳನ!
'ವರ್ಲ್ಡ್ ಬುಕ್ ಆಫ್ ರೆಕಾರ್ಡ್' ಗೆ ಸೇರಿದ ಬಿಜೆಪಿಯ ಭೋಪಾಲ್ ಸಮ್ಮೇಳನ!
ಭೋಪಾಲ್: ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ್ದ ಕಾರ್ಮಿಕರ ಬೃಹತ್ ಸಮ್ಮೇಳನ ಪ್ರತಿಷ್ಠಿತ 'ವರ್ಲ್ಡ್ ಬುಕ್ ಆಫ್ ರೆಕಾರ್ಡ್' ನಲ್ಲಿ ದಾಖಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿದೆ.
"ಕಾರ್ಯಕರ್ತರ ಮಹಾಕುಂಭ್" ಹೆಸರಿನ ಒಂದು ದಿನದ ಕಾರ್ಯಕ್ರಮದಲ್ಲಿ ೧೦ ಲಕ್ಷ ಮಂದಿ ಬಾಗವಹಿಸಿದ್ದು ಇದು ಯಾವುದೇ ರಾಜಕೀಯ ಪಕ್ಷದ ಅತ್ಯಂತ ದೊಡ್ಡ ಕೆಡರ್ ಆಧಾರಿತ ಸಮ್ಮೇಳನವಾಗಿತ್ತು ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ.
ಭೋಪಾಲ್ ನ ಜಂಬೋರಿ ಮೈದಾನದಲ್ಲಿ ನಡೆದಿದ್ದ ಸಮಾರಂಭದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ರಾಷ್ಟ್ರ, ರಾಜ್ಯ ನಾಯಕರು ಭಾಗವಹಿಸಿದ್ದರು. ಈ ಕಾರ್ಯಕ್ರಮ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಗೆ ಸೇರಿದ್ದಾಗಿ ಬ್ರಿಟನ್ ಮೂಲದ ಸಂಸ್ಥೆ ಪ್ರಕಟಣೆ ತಿಳಿಸಿದ್ದು ಇದಕ್ಕೆ ಸಂಬಂಧಿಸಿ ಪ್ರಮಾಣಪತ್ರವನ್ನು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ರಾಜೇಶ್ ಸಿಂಗ್ ಅವರಿಗೆ ನೀಡಿದೆ
ಮಧ್ಯ ಪ್ರದೇಶ ಬಿಜೆಪಿಯ ಮಾಧ್ಯಮ  ವಿಬಾಗ ಉಸ್ತುವಾರಿ ಲೋಕೇಂದ್ರ ಪರಾಶರ್ ಈ ಕುರಿತ ವಿವರಗಳನ್ನು ಮಾಧ್ಯಮಗಳಿಗೆ ನಿಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com