ಮೊಬೈಲ್ ಚಾರ್ಜ್ ಗೆ ಹಾಕಲು ಇಂಡಿಗೋ ವಿಮಾನದ ಕಾಕ್‌ಪಿಟ್ ಗೆ ನುಗ್ಗಲು ಯತ್ನಿಸಿದ ಪ್ರಯಾಣಿಕ!
ದೇಶ
ಮೊಬೈಲ್ ಚಾರ್ಜ್ ಮಾಡಲು ಇಂಡಿಗೋ ವಿಮಾನದ ಕಾಕ್‌ಪಿಟ್ ಗೆ ನುಗ್ಗಲು ಯತ್ನಿಸಿದ ಪ್ರಯಾಣಿಕ!
ಪ್ರಯಾಣಿಕನೊಬ್ಬ ಮೊಬೈಲ್ ಚಾರ್ಜ್ ಮಾಡುವುದಕ್ಕಾಗಿ ವಿಮಾನದ ಕಾಕ್ ಪಿಟ್ ಒಳಗೆ ಪ್ರವೇಶಿಸಲು ಯತ್ನಿಸಿದ್ದಾನೆ.
ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣಿಕರ ವಿಚಿತ್ರ ವರ್ತನೆಗಳು ಹೆಚ್ಚು ಸುದ್ದಿಯಾಗಿತ್ತುವೆ. ಇಂಥಹದ್ದೇ ಘಟನೆಯೊಂದು ಇಂಡಿಗೋ ವಿಮಾನದಲ್ಲಿ ನಡೆದಿದ್ದು, ಪ್ರಯಾಣಿಕನೊಬ್ಬ ಮೊಬೈಲ್ ಚಾರ್ಜ್ ಮಾಡುವುದಕ್ಕಾಗಿ ವಿಮಾನದ ಕಾಕ್ ಪಿಟ್ ಒಳಗೆ ಪ್ರವೇಶಿಸಲು ಯತ್ನಿಸಿದ್ದಾನೆ.
ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಪಾನಮತ್ತ ಪ್ರಯಾಣಿಕನೊಬ್ಬ, "ನಾನು ಮೊಬೈಲ್ ಚಾರ್ಜ್ ಗೆ ಹಾಕಬೇಕೆಂಬ ನೆಪದಲ್ಲಿ ಕಾಕ್‌ಪಿಟ್ ಗೆ ಪ್ರವೇಶಿಸಲು ಯತ್ನಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆ ವಿಮಾನ ಟೇಕ್ ಆಫ್ ಆಗುವುದಕ್ಕೆ ಮುನ್ನ ನಡೆದಿದ್ದು, ಕಿರಿಕಿರಿ ಉಂಟುಮಾಡಿದ ಪ್ರಯಾಣಿಕನನ್ನು ಸ್ಥಳೀಯ ಪೊಲೀಸ್ ಠಾಣೆಕೆ ಕರೆದೊಯ್ಯಲಾಗಿದೆ.ವಿಚಾರಣೆ ಬಳಿಕ ಆತನನ್ನು ಬಿಡುಗಡೆ ಮಾಡಲಾಗಿದೆ. ನಾಗರಿಕ ವಿಮಾನಯಾನ ನಿಯಮಗಳ ಪ್ರಕಾರ ಯಾವುದೆ ಪ್ರಯಾಣಿಕರೂ ಸಹ ಕಾಕ್ ಪಿಟ್ ನ್ನು ಪ್ರವೇಶಿಸುವಂತಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ