ಅಯೋಧ್ಯೆ ವಿವಾದ ಸಂಬಂಧದ ಪ್ರಕರಣ: ಸುಪ್ರೀಂ ಕೋರ್ಟ್ ತೀರ್ಪು ನಾಳೆ

ಬಹು ಚರ್ಚಿತ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನಾಳೆ (ಗುರುವಾರ) ತೀರ್ಪು ನಿಡಲಿದೆ.
ಅಯೋಧ್ಯೆ
ಅಯೋಧ್ಯೆ
ನವದೆಹಲಿ: ಬಹು ಚರ್ಚಿತ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನಾಳೆ (ಗುರುವಾರ) ತೀರ್ಪು ನಿಡಲಿದೆ.
ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎಂದಿದ್ದ ಇಸ್ಮಾಯಿಲ್ ಫಾರೂಕಿ ತೀರ್ಪನ್ನು ಪರಿಶೀಲನೆಗಾಗಿ ದೊಡ್ಡ ಸಂವಿಧಾನಿಕ ಪೀಠಕ್ಕೆ ಹಸ್ತಾಂತರಿಸಬೇಕೆ ಅಥವಾ ಬೇಡವೆ ಎನ್ನುವ ಕುರಿತು ಸುಪ್ರೀಂ ತೀರ್ಪು ಪ್ರಕಟಿಸಲಿದೆ.
ಸಿಜೆಐ ನೇತೃತ್ವದ ಮೂರು-ನ್ಯಾಯಾಧೀಶರ ಪೀಠವು 1994 ರಲ್ಲಿ ತಾನು ನಿಡಿದ್ದ ತೀರ್ಪು  'ಮಸೀದಿಗಳಲ್ಲಿ ನಮಾಜ್ ಮಾಡುವುದು ಇಸ್ಲಾಂನ ಅವಿಭಾಜ್ಯ ಭಾಗವಲ್ಲ'  ಎನ್ನುವ ಆದೇಶವನ್ನು ಪರಿಶೀಲನೆಗಾಗಿ ಸಾವಿಧಾನಿಕ ಪೀಠಕ್ಕೆ ಹಸ್ತಾಂತರ ಮಾಡಬೇಕೆ ಇಲ್ಲವೆ ಎನ್ನುವುದನ್ನು ನಿರ್ಧರಿಸಲಿದೆ.
2010ರಲ್ಲಿ ಅಯೋಧ್ಯೆಯ ವಿವಾದಿತ ಪ್ರದೇಶವನ್ನು ಮೂರು ಭಾಗವಾಗಿ ವಿಂಗಡಿಸಿಸ್ ಅಲಹಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು ನಾಳಿನ ತೀರ್ಪು ಇದರ ಭಾಗವಾಗಿ ಹೊರಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com