ಕಾಶ್ಮೀರ: ಎನ್ ಕೌಂಟರ್ ಗೆ ಬಲಿಯಾದ ಉಗ್ರ ಎಲ್ ಇಟಿ ಕಮಾಂಡರ್

ಉತ್ತರ ಕಾಶ್ಮೀರದಲ್ಲಿ ಮಂಗಳವಾರ ಹತ್ಯೆಯಾದ ಇಬ್ಬರು ಉಗ್ರರ ಪೈಕಿ ಓರ್ವ ಲಷ್ಕರ್ -ಇ-ತೊಯಿಬಾ(ಎಲ್ ಇಟಿ) ಉಗ್ರ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶ್ರೀನಗರ: ಉತ್ತರ ಕಾಶ್ಮೀರದಲ್ಲಿ ಮಂಗಳವಾರ ಹತ್ಯೆಯಾದ ಇಬ್ಬರು ಉಗ್ರರ ಪೈಕಿ ಓರ್ವ ಲಷ್ಕರ್ -ಇ-ತೊಯಿಬಾ(ಎಲ್ ಇಟಿ) ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಆಗಿದ್ದು, ಕಳೆದ ಮೂರು ವರ್ಷಗಳಿಂದ ಕಣಿವೆ ರಾಜ್ಯದಲ್ಲಿ ಸಕ್ರಿಯವಾಗಿದ್ದ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಎಲ್ ಇಟಿ ಟಾಪ್ ಕಮಾಂಡರ್ ಅಬು ಮಾಝ್ ಎಂದು ಗುರುತಿಸಲಾಗಿದ್ದು, ಈ ಉಗ್ರ ಪಾಕಿಸ್ತಾನದ ಪ್ರಜೆ ಎಂದು ಪೊಲೀಸರು ಹೇಳಿದ್ದಾರೆ.
ಹತ್ಯೆಯಾದ ಉಗ್ರರ ಬಳಿ ಸಿಕ್ಕ ವಸ್ತುಗಳಿಂದ ಅವರ ಗುರುತು ಪತ್ತೆ ಹಚ್ಚಲಾಗಿದ್ದು, ಅಬು ಮಾಝ್ ಪಾಕಿಸ್ತಾನ ಮೂಲದ ಎಲ್ ಇಟಿ ಕಮಾಂಡರ್ ಆಗಿದ್ದು, ಕಳೆದು ಮೂರು ವರ್ಷಗಳಿಂದ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಹತ್ಯೆಯಾದ ಮತ್ತೊಬ್ಬ ಉಗ್ರ ಅಬ್ದುಲ್ ಮಜೀದ್ ಮಿರ್ ಅಲಿಯಾಸ್ ಸಮೀರ್ ಎಂದು ಗುರುತಿಸಲಾಗಿದೆ.
ನಿನ್ನೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು. ಬೋಮಾಯಿ ಪ್ರದೇಶದಲ್ಲಿ ಉಗ್ರರು ಅವಿತಿರುವ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿ, ಇಬ್ಬರು  ಉಗ್ರರನ್ನು ಎನ್ ಕೌಂಟರ್ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com