ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡ ಭಾರತೀಯ ವಾಯುಪಡೆ ಉಪ ಮುಖ್ಯಸ್ಥ !

ಭಾರತೀಯ ವಾಯುಪಡೆ ಉಪಮುಖ್ಯಸ್ಥ ಏರ್ ಮಾರ್ಷಲ್ ಶಿರಿಶ್​ ಬಾಬನ್ ದೇವ್​ ಅವರು ಆಕಸ್ಮಿಕವಾಗಿ ತಮ್ಮ ತೊಡೆಗೆ ತಾವೇ ಗುಂಡು ಹೊಡೆದುಕೊಂಡಿದ್ದಾರೆ.
ಶಿರಿಶ್​ ಬಾಬನ್ ದೇವ್
ಶಿರಿಶ್​ ಬಾಬನ್ ದೇವ್
Updated on
ನವದೆಹಲಿ: ಭಾರತೀಯ ವಾಯುಪಡೆ ಉಪಮುಖ್ಯಸ್ಥ ಏರ್ ಮಾರ್ಷಲ್ ಶಿರಿಶ್​ ಬಾಬನ್ ದೇವ್​ ಅವರು ಆಕಸ್ಮಿಕವಾಗಿ ತಮ್ಮ ತೊಡೆಗೆ ತಾವೇ ಗುಂಡು ಹೊಡೆದುಕೊಂಡಿದ್ದಾರೆ.
ಗಾಯಗೊಂಡಿರುವ ಅವರನ್ನು ದೆಹಲಿ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಗಿದೆ. ಶಸ್ತ್ರಚಿಕಿತ್ಸೆ ಮೂಲಕ ಗುಂಡು ತೆಗೆಯಲಾಗಿದೆ. ತೊಡೆ ಭಾಗದಲ್ಲಿ ಮೂಳೆ ಮುರಿದಿರುವುದರಿಂದ ಪ್ಲೇಟ್​ ಅಳವಡಿಸಲಾಗಿದೆ. 
ದೇವ್​ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಘಟನೆ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ದೇವ್​ ಅವರು ಐಎಎಫ್​ ಉಪ ಮುಖ್ಯಸ್ಥರಾಗಿ ಜುಲೈನಲ್ಲಿ ಅಧಿಕಾರ ಸ್ವೀಕರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com