ರಾಮ ಜನ್ಮಭೂಮಿ ವಿವಾದ: ಅಕ್ಟೋಬರ್ 29ಕ್ಕೆ ಸುಪ್ರೀಂ ವಿಚಾರಣೆ ಪ್ರಾರಂಭ

ಅಯೋಧ್ಯೆಯ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 29ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಅಯೋಧ್ಯಾ
ಅಯೋಧ್ಯಾ
ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 29ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಮಸೀದಿಯು ಇಸ್ಲಾಂ ನ ಅವಿಭಾಜ್ಯ ಅಂಗವಲ್ಲ ಎನ್ನುವ 1994 ರ ಫಾರೂಕಿ ಪ್ರಕರಣದ ತೀರ್ಪನ್ನು ಸುಪ್ರೀಂ  ಕೋರ್ಟ್ ಇಂದು ಎತ್ತಿ ಹಿಡಿದಿದೆ. ಈ ಸಂದರ್ಭದಲ್ಲಿ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆ ದಿನಾಂಕ ನಿಗದಿಗೊಳಿಸಿ ಕೋರ್ಟ್ ಆದೇಶ ನಿಡಿದೆ.
ಪ್ರಸಕ್ತ ಭಾರತ ಮುಖ್ಯ ನ್ಯಾಯಮೂರ್ತಿಗಳಾಗಿರುವ ದೀಪಕ್ ಮಿಶ್ರಾ ಅಕ್ಟೋಬರ್ 2 ರಂದು ನಿವೃತ್ತರಾಗಲಿದ್ದು ವಿವಾದಿತ ಜಾಗಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಹೊಅದಾಗಿ ರಚನೆಯಾಗುವ ತ್ರಿಸದಸ್ಯ ಪೀಠ ಆಲಿಸಲಿದೆ.
2010ರ ಅಲಹಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಅರ್ಜಿ ವಿಚಾರಣೆಯು ಸುಪ್ರೀಂ ನಲ್ಲಿ ನಡೆಯುತ್ತಿದ್ದು ಇದರ ಬಾಗವಾಗಿ ಸಿಜೆಐ ಮಿಶ್ರಾ ನೇತೃತ್ವದ ಮೂರು ನ್ಯಾಯಾಧೀಶರ ಪೀಠ ಇಂದು (ಗುರುವಾರ) ಮಸೀದಿಯು ಇಸ್ಲಾಂನ ಅವೈಭಾಜ್ಯ ಅಂಗವೆ ಎನ್ನುವ ಕುರಿತಂತೆ ಫಾರೂಕಿ ತೀರ್ಪನ್ನೇ ಎತ್ತಿ ಹಿಡಿದಿದೆ.
ಅಲಹಬಾದ್ ಹೈಕೋರ್ಟ್ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರಾ ಮತ್ತು ರಾಮ್ ಲಾಲ್ಲಾ ಪಕ್ಷಗಳಿಗೆ 2.77 ಎಕರೆ ಭೂಮಿಯನ್ನು ಸಮಾನವಾಗಿ ವಿಂಗಡಿಸಬೇಕೆಂದು ತೀರ್ಪು ನೀಡಿದ್ದು ಹೈಕೋರ್ಟ್ ನ ಮೂವರು ನ್ಯಾಯಾಧೀಶರ ಪೀಠ  2: 1 ಬಹುಮತದ ಆಧಾರದಲ್ಲಿ ತೀರ್ಪು ಪ್ರಕಟಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com