ಅಯೋಧ್ಯೆ ವಿವಾದದ ಅಂತಿಮ ತೀರ್ಪು ಶೀಘ್ರವೇ ಬರುವ ವಿಶ್ವಾಸವಿದೆ: ಆರ್.ಎಸ್.ಎಸ್

ಇದೇ ವರ್ಷ ಅಕ್ಟೋಬರ್ 29ರಿಂದ ರಾಮ ಜನ್ಮ ಭೂಮಿ ವಿವಾದ ಸಂಬಂಧ ವಿಚಾರಣೆ ಪ್ರಾರಂಭಿಸುವುದಾಗಿ ಸುಪ್ರೀಂ ಕೋರ್ಟ್ ಇಂದು ಹೇಳಿರುವುದು ನಮಗೆ ಸಂತಸ ತಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನಾಗ್ ಪುರ: ಇದೇ ವರ್ಷ ಅಕ್ಟೋಬರ್ 29ರಿಂದ ರಾಮ ಜನ್ಮ ಭೂಮಿ ವಿವಾದ ಸಂಬಂಧ ವಿಚಾರಣೆ ಪ್ರಾರಂಭಿಸುವುದಾಗಿ ಸುಪ್ರೀಂ ಕೋರ್ಟ್ ಇಂದು ಹೇಳಿರುವುದು ನಮಗೆ ಸಂತಸ ತಂದಿದೆ. ನ್ಯಾಯಾಲಯದ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ.ಇನ್ನು ಶೀಘ್ರವಾಗಿಯೇ ವಿವಾದದ ಕುರಿತ ಅಂತಿಮ ತೀರ್ಪು ಸಹ ಬರುವ ವಿಶ್ವಾಸ ನಮಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಗುರುವಾರ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಆರ್.ಎಸ್.ಎಸ್ ಹರ್ಷ ವ್ಯಕ್ತಪಡಿಸಿದೆ.
ಭೂ ವಿವಾದದ ಕುರಿತು ಸಿವಿಲ್ ಮೊಕದ್ದಮೆಯನ್ನು ಅಕ್ಟೋಬರ್ 29 ರಂದು ಹೊಸದಾಗಿ ರಚಿಸಲಾಗುವ ತ್ರಿಸದಸ್ಯ ಪೀಠ ಕೇಳಲಿದೆ ಎನ್ನುವ ತೀರ್ಮಾನವನ್ನು ಸ್ವಾಗತಿಸಿರುವ ಆರ್.ಎಸ್.ಎಸ್ ನ ಇಂದ್ರೇಶ್ ಕುಮಾರ್ ನಮಗೆ ನ್ಯಾಯಾಲಯದ ಬಗ್ಗೆ ವಿಶ್ವಾಸವಿದೆ. ನ್ಯಾಯಾಲಯವು ಅಯೋಧ್ಯೆ ವಿವಾದವನ್ನು ಶೀಘ್ರವಾಗಿ ತೀರ್ಮಾನಿಸಬಹುದು  ಎನ್ನುವ ನಂಬಿಕೆ ಇದೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷವು "ಸಮಸ್ಯೆಯನ್ನು ಜೀವಂತವಾಗಿರಿಸಿಕೊಳ್ಳುವ" ಉದ್ದೇಶ ಹೊಂದಿದ್ದ ಕಾರಣ ತ್ವರಿತ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿತ್ತು ಎಂದು ಅವರು ಆರೋಪಿಸಿದ್ದಾರೆ.
"ತ್ರಿವಳಿ ತಲಾಕ್ ನಂತಹಾ ಪ್ರಕರಣದಲ್ಲಿ ನೀಡಿದ ಐತಿಹಾಸಿಕ ತೀರ್ಪಿನ ಕಾರಣ ಭಾರತ ಸೇರಿ ವಿಶ್ವದಾದ್ಯಂತ ಮುಸ್ಲಿಂ ಬಾಂಧವರು ನ್ಯಾಯಾಂಗವನ್ನು ಅಭಿನಂದಿಸಿದ್ದಾರೆ. ಕಳೆದ ವರ್ಷ ನ್ಯಾಯಾಲಯ ನೀಡಿದ್ದ ತ್ರಿವಳಿ ತಲಾಕ್ ತೀರ್ಪಿನ ರೀತಿಯಲ್ಲಿಯೇ ಈ ವರ್ಷ ಸಹ ಅಯೋಧ್ಯೆ ತೀರ್ಪು ಹೊರಬೀಳಲಿದೆ" ಕುಮಾರ್ ಹೇಳಿದ್ದಾರೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರ ನಂಬಿಕೆ ಇನ್ನಷ್ಟು ಬಲವಾಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
"ಪಾಕಿಸ್ತಾನ ದಲ್ಲಾಳಿ"ಯಂತೆ ಕಾಂಗ್ರೆಸ್ ಕಾರ್ಯನಿರ್ವಹಿಸುತ್ತಿದೆ.ನಮ್ಮ ಸೈನಿಕರ ಮೇಲೆ ಹಲವು ದೌರ್ಜನ್ಯಗಳು ನಡೆದಿವೆ, ಆದರೆ ರಾಹುಲ್ ಹಾಗೂ ಕಪಿಲ್ ಸಿಬಲ್ ಪಾಕಿಸ್ತಾನವನ್ನು ಖಂಡಿಸಿ ಯಾವ ಹೇಏಳಿಕೆ ನೀಡಿಲ್ಲ.ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಬೇಡ ಎನ್ನುವ ಮೂಲಕ ಅವರು ತಾವು ಯಾರ ಪರ ಎನ್ನುವುದನ್ನು ತೋರಿಸಿದ್ದಾರೆ ಎಂದು ಕುಮಾರ್ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com