

ಹೈದ್ರಾಬಾದ್ :ಅವಧಿ ಪೂರ್ಣಗೊಳ್ಳುವ ಮುನ್ನವೇ ತೆಲಂಗಾಣ ವಿಧಾನಸಭೆಯನ್ನು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿಸರ್ಜಿಸಿರುವುದರಿಂದ ಚುನಾವಣೆ ಎದುರಾಗಿದ್ದು, ವಿವಿಧ ಪಕ್ಷಗಳ ಮುಖಂಡರುಗಳು,ಕಾರ್ಯಕರ್ತರು ತಮ್ಮ ಪಕ್ಷದ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಮುಂದಿನ ತಿಂಗಳ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ನವೆಂಬರ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಡಿಸೆಂಬರ್ ಮೊದಲ ವಾರದಲ್ಲಿ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ. ಪಿ. ರಾವತ್ ರಾವತ್ ಟಿವಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಎನ್ ಡಿಎ ಮೈತ್ರಿಕೂಟದಲ್ಲಿ ಟಿಆರ್ ಎಸ್ ಸೇರ್ಪಡಿಸಿಕೊಳ್ಳುವ ಸಂಬಂಧ ಈ ತಿಂಗಳ ಮೊದಲ ವಾರ ನಡೆದ ಮಾತುಕತೆ ವಿಫಲಗೊಂಡಿದ್ದು, ಕೆ. ಚಂದ್ರಶೇಖರ್ ರಾವ್ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದು, ನಷ್ಟ ಉಂಟುಮಾಡಲಿದೆ ಎಂದು ಬಿಜೆಪಿ ಹೇಳಿದೆ.
ಈ ಮಧ್ಯೆ ಸಿದ್ದಿಪೇಟೆಯಲ್ಲಿ ಮೂವರು ಕ್ಷೌರಿಕರು ಉಚಿತವಾಗಿ ಹೇರ್ ಕಟ್ಟಿಂಗ್ ಮಾಡುವ ಮೂಲಕ ಟಿಆರ್ ಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಮೂವರು ಪ್ರತಿದಿನ ಉಚಿತವಾಗಿ ಹೇರ್ ಕಟ್ಟಿಂಗ್ ಮಾಡುತ್ತಿದ್ದು, ಟಿಆರ್ ಎಸ್ ಪರ ಮತ ಯಾಚಿಸುತ್ತಿದ್ದಾರೆ.
ಉಚಿತವಾಗಿ 30 ಜನರಿಗೆ ಹೇರ್ ಕಟ್ಟಿಂಗ್ ಮಾಡಿದ್ದು, ಚುನಾವಣೆಯಲ್ಲಿ ಟಿಆರ್ ಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ಹೇಳಿದ್ದೇನೆ. ಆದ್ದರಿಂದ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಲಿದೆ ಎಂದು ಕ್ಷೌರಿಕ ಕ್ವಾತಲ್ ಶ್ರೀನಿವಾಸ್ ಹೇಳುತ್ತಾರೆ.
Advertisement