ಒಡಿಶಾ: ಇಂಜಿನಿಯರ್ ವಿದ್ಯಾರ್ಥಿ ರಾಹುಲ್ ಎಂಬಾತ ಜಲಪಾತವೊಂದರ ಬಳಿ 200 ಅಡಿ ಆಳಕ್ಕೆ ಬಿದ್ದಿದ್ದು ಈ ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಶ್ಚಿಮ ಒಡಿಶಾದ ಬರಾಘರ್ ಜಿಲ್ಲೆಯ ದಿಯೋ ದರಾಹ್ ಬೆಟ್ಟದಲ್ಲಿ ನಲಿಚುಯಾನ್ ಜಲಪಾತದಲ್ಲಿ ಬುಧವಾರ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ರಾಹುಲ್ ಬದುಕುಳಿದಿದ್ದಾನೆ.
ರಾಹುಲ್ ನಾಲ್ವರು ಗೆಳೆಯರೊಂದಿಗೆ ಪಿಕ್ನಿಕ್ ಹೋಗಿದ್ದರು. ವಿದ್ಯಾರ್ಥಿ ಬಂಡೆಯಿಂದ ಕೆಳಗೆ ಇಳಿಯುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ತೀವ್ರತೆಗೆ ರಾಹುಲ್ ಸೊಂಟ ಮುರಿದಿದೆ. ರಾಹುಲ್ ಬೀಳುತ್ತಿರುವ ದೃಶ್ಯವನ್ನು ಮತ್ತೊಬ್ಬ ವಿದ್ಯಾರ್ಥಿ ವಿಡಿಯೋ ಸೆರೆ ಹಿಡಿದಿದ್ದಾನೆ.