ಕೆಚ್ಚೆದೆಯ ಸೈನಿಕರ ತ್ಯಾಗದ ಬಗ್ಗೆ ದೇಶವು ಹೆಮ್ಮೆ ಪಡುತ್ತದೆ: 'ಪರಾಕ್ರಮ ಪರ್ವ' ದಲ್ಲಿ ಪ್ರಧಾನಿ ಮೋದಿ ಸಂದೇಶ
"ತಾಯ್ನಾಡಿನ ಸುರಕ್ಷತೆಗಾಗಿ ಸದಾ ಕಂಕಣಬದ್ದರಾಗಿರುವ ಧೈರ್ಯಶಾಲಿ ಮಿಲಿಟರಿ ಶಕ್ತಿಯ ಬಗ್ಗೆ ರಾಷ್ಟ್ರವು ಹೆಮ್ಮೆ ಪಡುತ್ತದೆ" ಜೋಧ್ ಪುರದ ಕೋನಾರ್ಕ್ ಯುದ್ಧ ಸ್ಮಾರಕಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ...
ಜೋಧ್ ಪುರ: "ತಾಯ್ನಾಡಿನ ಸುರಕ್ಷತೆಗಾಗಿ ಸದಾ ಕಂಕಣಬದ್ದರಾಗಿರುವ ಧೈರ್ಯಶಾಲಿ ಮಿಲಿಟರಿ ಶಕ್ತಿಯ ಬಗ್ಗೆ ರಾಷ್ಟ್ರವು ಹೆಮ್ಮೆ ಪಡುತ್ತದೆ" ಜೋಧ್ ಪುರದ ಕೋನಾರ್ಕ್ ಯುದ್ಧ ಸ್ಮಾರಕಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಆಹ್ವಾನಿತರ ಪುಸ್ತಕ (ವಿಸಿಟರ್ಸ್ ಬುಕ್) ದಲ್ಲಿ ಹೀಗೆ ಬರೆದಿದ್ದಾರೆ.
ಈ ದಿನ ಮುಂಜಾನೆ ಜೋಧ್ ಪುರಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಮೂರು ಸೇನೆಗಳ ಪ್ರಮುಖರು ಗೌರವ ರಕ್ಷೆ ನೀಡಿದ್ದರು.ಇದಾದ ಬಳಿಕ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದದಲ್ಲಿ ಭಾರತೀಯ ಪಡೆಗಳು ನಡೆಸಿದ್ದ ಸರ್ಜಿಕಲ್ ದಾಳಿಯ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಮೂರು ದಿನಗಳ ಸೇನಾ ಪ್ರದರ್ಶನ "ಪರಾಕ್ರಮ ಪರ್ವ"ಕ್ಕೆ ಚಾಲನೆ ನೀಡಿದ್ದಾರೆ.
ಗುಜರಾತಿ ಭಾಷೆಯಲ್ಲಿ ಬರೆಯಲಾದ ಸಂದೇಶದಲ್ಲಿ ಮೋದಿ "ಉತ್ಕೃಷ್ಠ ತ್ಯಾಗವನ್ನು ಪ್ರದರ್ಶಿಸುವ ಮೂಲಕ ಪ್ರತಿ ಪೀಳಿಗೆಗೆ ಸ್ಪೂರ್ತಿಯ ಸಂಕೇತವನ್ನು ನೀಡುವ ಕೆಚ್ಚೆದೆಯ ಹೃದಯಗಳಿಗೆ ನನ್ನ ನಮನಗಳು " ಎಂದು ಬರೆದಿದ್ದಾರೆ.
ಕೊನಾರ್ಕ್ ಕಾರ್ಪ್ಸ್ ಆಯೋಜಿಸಿದ್ದ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಶಕ್ತಿಯನ್ನು ಪ್ರದರ್ಶಿಸುವ ಉದ್ದೇಶ, ರಾಷ್ಟ್ರ ನಿರ್ಮಾಣದಲ್ಲಿ ಇದರ ಕೊಡುಗೆ ಕುರಿತಂತೆ ಪ್ರದರ್ಶನವಿರಲಿದೆ. "ಪರಾಕ್ರಮ ಪರ್ವ" ಹೆಸರಿನ ಈ ಕಾರ್ಯಕ್ರಮ ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ.