ಆರೋಗ್ಯ ವಿಮಾ ಯೋಜನೆ: ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ !

ಪ್ರಧಾನಿ ಮೋದಿ ರಾಫೆಲ್ ಹಗರಣದಲ್ಲಿ ಅನಿಲ್ ಅಂಬಾನಿಗೆ 1,30 , 000 ಕೋಟಿ ರೂಪಾಯಿ ನೀಡುತ್ತಾರೆ. ಆದರೆ ,ಆರೋಗ್ಯ ವಿಮಾ ಯೋಜನೆ ವಾರ್ಷಿಕ ವೆಚ್ಚವಾಗಿ ಪ್ರತಿಯೊಬ್ಬ ವ್ಯಕ್ತಿಗೂ ಕೇವಲ 40 ರೂಪಾಯಿಯ ಲಾಲಿಪಪ್ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ  ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರಾಫೆಲ್ ಹಗರಣದಲ್ಲಿ ಅನಿಲ್ ಅಂಬಾನಿಗೆ 1,30 , 000 ಕೋಟಿ ರೂಪಾಯಿ ನೀಡುತ್ತಾರೆ. ಆದರೆ ,ಆರೋಗ್ಯ ವಿಮಾ ಯೋಜನೆ ವಾರ್ಷಿಕ ವೆಚ್ಚವಾಗಿ  ಪ್ರತಿಯೊಬ್ಬ ವ್ಯಕ್ತಿಗೂ ಕೇವಲ 40 ರೂಪಾಯಿಯ ಲಾಲಿಪಪ್  ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

50 ಕೋಟಿ ಜನರಿಗೆ 2 ಸಾವಿರ ಕೋಟಿ ಆರೋಗ್ಯ ವಿಮೆ ಯೋಜನೆಗೆ ವಾರ್ಷಿಕ ವೆಚ್ಚವಾಗಿ ಪ್ರತಿಯೊಬ್ಬರಿಗೂ ಕೇವಲ 40 ರೂ. ನೀಡಲಾಗುತ್ತಿದೆ , ದೇಶದ ಕಾವಲುಗಾರ   ಖಜಾನೆಯ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿದ್ದಾರೆ ಎಂದು ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ರಾಫೆಲ್ ಹಗರಣದಲ್ಲಿ ಅನಿಲ್ ಅಂಬಾನಿಗೆ 1,30, 000 ಕೋಟಿ ನೀಡಲಾಗಿದೆ. ಆಯುಷ್ಮನ್ ಭಾರತ್- ಪಿಎಂಜೆಎವೈ ಯೋಜನೆಯಡಿ 50 ಕೋಟಿ ಜನರಿಗೆ 2 ಸಾವಿರ ಕೋಟಿ ನೀಡಲಾಗುತ್ತಿದೆ. ವಾರ್ಷಿಕ ವೆಚ್ಚವಾಗಿ ಪ್ರತಿಯೊಬ್ಬ ವ್ಯಕ್ತಿಗೂ ಕೇವಲ 40 ರೂ. ನೀಡುತ್ತಿದ್ದಾರೆ. ವಾವ್ಹ್  ಮೋದಿಜೀ ವಾವ್ಹ್   ಈ ಸುದ್ದಿ ನಿಮ್ಮ ಪ್ರಚಾರಕ್ಕಾಗಿ ಎಂದು ಟ್ವಿಟರ್ ನಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com