ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ವಿದ್ಯುತ್ ಕಾಯ್ದೆ ತಿದ್ದುಪಡಿಯಿಂದ ಮೋದಿ ಆಪ್ತರಿಗೆ ಲಾಭ: ಕೇಜ್ರಿವಾಲ್ ಆರೋಪ

ಕೇಂದ್ರ ಸರ್ಕಾರ 2003ರ ವಿದ್ಯುತ್ ಕಾಯ್ದೆಗೆ ತರಲುದ್ದೇಶಿಸಿದ ತಿದ್ದುಪಡಿಗಳು ಅತ್ಯಂತ ಅಪಾಯಕಾರಿಯಾಗಿದೆ,
ನವದೆಹಲಿ: ಕೇಂದ್ರ ಸರ್ಕಾರ 2003ರ ವಿದ್ಯುತ್ ಕಾಯ್ದೆಗೆ ತರಲುದ್ದೇಶಿಸಿದ ತಿದ್ದುಪಡಿಗಳು ಅತ್ಯಂತ ಅಪಾಯಕಾರಿಯಾಗಿದೆ, 'ಕೆಲವು ವಿದ್ಯುತ್ ಕಂಪನಿ’ಗಳಿಗೆ ಲಾಭವಾಗಲು ದೇಶದ ಬಡ ಜನರು ಸಂಕಷ್ಟ ಅನುಭವಿಸುವುದಕೆ ಕಾರಣವಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ಪ್ರಸ್ತಾವಿತ ತಿದ್ದುಪಡಿ ದೇಶದ ಕೆಲವೇ ವಿದ್ಯುತ್ ಕಂಪನಿಗಳಿಗೆ ಲಾಭ ತರಲಿದೆ, ಉಳಿದಂತೆ ಬಡ ಜನತೆಗೆ ಇನ್ನಷ್ಟು ಆರ್ಥಿಕ ಹೊರೆಯನ್ನುಂಟುಮಾಡಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೇಶದ ಎಲ್ಲಾ ಮುಖ್ಯಮಂತ್ರಿಗಳಿಗೆ ಈ ಕುರಿತು ನಾನು ಪತ್ರ ಬರೆಯುತ್ತೇನೆ. ಬಿಜೆಪಿಯೇತರ ರಾಜ್ಯದ ಮುಖ್ಯಮಂತ್ರಿಗಳನ್ನು ವೈಯುಕ್ತಿಕವಾಗಿ ಭೇಟಿಯಾಗಿ ಈ ಸಂಅಬಂಧ ಚರ್ಚಿಸುತ್ತೇನೆ.ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಹೇಳಿದ್ದಾರೆ.
ಪ್ರಸ್ತಾವಿತ ತಿದ್ದುಪಡಿಯಿಂದ ಕ್ರಾಸ್ ಸಬ್ಸಿಡಿಗಳು ಇಲ್ಲವಾಗಲಿದ್ದು ಇದರಿಂದ ಯುನಿಟ್ ಒಂದರ ಬೆಲೆ ಎರಡರಿಂದ ಐದು ಪಟ್ಟು ಏರಿಕೆಯಾಗಲಿದೆ.ಈ ಕಾರಣ ಮದ್ಯಮವರ್ಗ ಸಾಕಷ್ಟು ಕಷ್ಟಕ್ಕೀಡಾಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್ ವಿವರಿಸಿದ್ದಾರೆ.
ಪ್ರಧಾನಿ ಮೋದಿಯವರಿಗೆ ಆಪ್ತವಾಗಿರುವ ಕೆಲವೇ ಕೆಲವು ವಿದ್ಯುತ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಕಾರಣ ಈ ತಿದ್ದುಪಡಿ ತರಲಾಗುತ್ತಿದೆ ಎನ್ನುವುದನ್ನು ನಾನು ವಿವರಿಸುತ್ತೇನೆ, ಈ ಕುರಿತು ಜನ ಜಾಗೃತಿ ಮೂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಕೇಜ್ರಿವಾಲ್ ಬಿಜೆಪಿ ಮುಖ್ಯಸ್ಥ ಅಮಿತ್ ಷಾ ಅವರಿಗೆ ದೆಹಲಿ ಸರ್ಕಾರ  ಮೂರು ವರ್ಷಗಳಲ್ಲಿ ಮಾಡಿದ ಕಾರ್ಯಗಳು ಹಾಗೂ ಕೇಂದ್ರ ಸರ್ಕಾರದ ಅಭಿವೃದ್ದಿ ಕಾರ್ಯಗಳ ಕುರಿತು ಮುಕ್ತ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com