ಜಮ್ಮು-ಕಾಶ್ಮೀರ ಸ್ಥಳೀಯ ಸಂಸ್ಥೆ ಚುನಾವಣೆ: 69 ಅಭ್ಯರ್ಥಿಗಳು ಚುನಾವಣೆ ಇಲ್ಲದೆಯೇ ಆಯ್ಕೆ

ಜಮ್ಮು-ಕಾಶ್ಮೀರದಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ತಯಾರಿ ನಡೆಯುತ್ತಿದ್ದು, ಈ ವರೆಗೂ 69 ಅಭ್ಯರ್ಥಿಗಳು ಚುನಾವಣೆಯನ್ನೇ ಎದುರಿಸದೇ ಆಯ್ಕೆಗೊಂಡಿದ್ದಾರೆ.
ಜಮ್ಮು-ಕಾಶ್ಮೀರ ಸ್ಥಳೀಯ ಸಂಸ್ಥೆ ಚುನಾವಣೆ: 69 ಅಭ್ಯರ್ಥಿಗಳು ಚುನಾವಣೆ ಇಲ್ಲದೆಯೇ ಆಯ್ಕೆ
ಜಮ್ಮು-ಕಾಶ್ಮೀರ ಸ್ಥಳೀಯ ಸಂಸ್ಥೆ ಚುನಾವಣೆ: 69 ಅಭ್ಯರ್ಥಿಗಳು ಚುನಾವಣೆ ಇಲ್ಲದೆಯೇ ಆಯ್ಕೆ
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ತಯಾರಿ ನಡೆಯುತ್ತಿದ್ದು, ಈ ವರೆಗೂ 69 ಅಭ್ಯರ್ಥಿಗಳು ಚುನಾವಣೆಯನ್ನೇ ಎದುರಿಸದೇ ಆಯ್ಕೆಗೊಂಡಿದ್ದಾರೆ. 
ಮೊದಲ ಹಂತದ ಚುನಾವಣೆ ವೇಳೆಗೆ 69 ಅಭ್ಯರ್ಥಿಗಳು ಚುನಾವಣೆಯನ್ನೇ ಎದುರಿಸದೇ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಜಮ್ಮು-ಕಾಶ್ಮೀರ ಮುಖ್ಯ ಚುನಾವಣಾ ಅಧಿಕಾರಿ ಶಲೀನ್ ಕಬ್ರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.  ಬಡ್ಗಮ್ ನಲ್ಲಿ 24 ಅಭ್ಯರ್ಥಿಗಳು, ಅನಂತ್ ನಾಗ್ ನಿಂದ 17, ಕುಲ್ಗಮ್ ನಿಂದ 13, ಕುಪ್ವಾರದಿಂದ 8, ಬಾರಮುಲ್ಲಾದಿಂದ 6, ಬಂಡಿಪೋರದಿಂದ ಒಬ್ಬ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಈ ಎಲ್ಲಾ ಕ್ಷೇತ್ರಗಳಲ್ಲಿಯೂ ವಿರೋಧಿಗಳು ನಾಮಪತ್ರ ವಾಪಸ್ ಪಡೆದಿದ್ದು ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗಳನ್ನು ವಿಜೇತರೆಂದು ಘೋಷಿಸಲಾಗಿದೆ. 
ಇನ್ನು ಜಮ್ಮು ಪ್ರಾಂತ್ಯದಲ್ಲಿಯೂ ಸಹ 9 ಅಭ್ಯರ್ಥಿಗಳನ್ನು ಸಿಇಒ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಘೋಷಣೆ ಮಾಡಿದ್ದಾರೆ. ಅ.8, 10,13, 16 ರಂದು 79 ನಗರ ಸ್ಥಳೀಯ ಸಂಸ್ಥೆಗಳಿಗೆ ನಾಲ್ಕನೇ ಹಂತದ ಚುನಾವಣೆ ನಡೆಯಲಿದೆ.  ಮೊದಲ ಹಂತದಲ್ಲಿ 422 ವಾರ್ಡ್ ಗಳಲ್ಲಿ ಚುನಾವಣೆ ನಡೆಯಲಿದ್ದು 1473 ನಾಮಪತ್ರಗಳನ್ನು ಸ್ವೀಕರಿಸಲಾಗಿತ್ತು ಈ ಪೈಕಿ 1441 ನಾಮಪತ್ರಗಳು ಸಿಂಧುವಾಗಿತ್ತು, ಒಟ್ಟಾರೆ 1,283 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com