'ನಗರ ನಕ್ಸಲ್' ಪದವನ್ನು ವ್ಯಾಖ್ಯಾನಿಸಿ- ರೋಮಿಲಾ ಥಾಪರ್

ಸಾಮಾಜಿಕ ಹೋರಾಟಗಾರರ ಗೃಹ ಬಂಧನ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿರುವ ಖ್ಯಾತ ಇತಿಹಾಸ ತಜ್ಞೆ ರೊಹಿಲಾ ಥಾಪರ್, ನಗರ ನಕ್ಸಲ್ ಪದವನ್ನು ವ್ಯಾಖ್ಯಾನಿಸಿ ಎಂದು ಸರ್ಕಾರವನ್ನು ಕೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸಾಮಾಜಿಕ ಹೋರಾಟಗಾರರ ಗೃಹ ಬಂಧನ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿರುವ ಖ್ಯಾತ ಇತಿಹಾಸ ತಜ್ಞೆ ರೊಹಿಲಾ ಥಾಪರ್,  ನಗರ ನಕ್ಸಲ್ ಪದವನ್ನು ವ್ಯಾಖ್ಯಾನಿಸಿ  ಎಂದು ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರಕ್ಕೆ ಇದರ ಅಥವಾ ಅಥವಾ ತಮ್ಮಂತಹ ಹೋರಾಟಗಾರರ ಬಗ್ಗೆ ಅರ್ಥ ಆಗಲ್ಲ ಎಂದು ಅವರು ಹೇಳಿದ್ದಾರೆ.

ವರವರರಾವ್ ಸೇರಿದಂತೆ ಐವರು ಸಾಮಾಜಿಕ ಹೋರಾಟಗಾರರ ಗೃಹ ಬಂಧನ ಕುರಿತಂತೆ ಮಾತನಾಡಿದ ಅವರು, ಸಾಮಾಜಿಕ ಅನ್ಯಾಯದ ವಿರುದ್ದ ಇವರು ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ನಾವೆಲ್ಲರೂ ಭಾರತದಲ್ಲಿಯೇ ಜನಿಸಿದ್ದು, ಭಾರತೀಯರಾಗಿಯೇ ಬದುಕುತ್ತಿದ್ದೇವೆ. ಒಳ್ಳೇಯ ಕಾರಣದಿಂದ ಈ ಸಾಮಾಜಿಕ ಹೋರಾಟಗಾರರು ಹೋರಾಟ ಮಾಡುತ್ತಿದ್ದಾರೆ . ನಗರ ನಕ್ಸಲ್ ಅರ್ಥ ರಾಜಕೀಯ ಪ್ರೇರಿತದಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ.

ನಗರ ನಕ್ಸಲ್ ಅರ್ಥ ನಮಗ್ಯಾರಿಗೂ ಗೊತ್ತಿಲ್ಲ. ಮೊದಲು ಸರ್ಕಾರವನ್ನು ಕೇಳಬಯಸುತ್ತೇನೆ ನಗರ ನಕ್ಸಲ್  ಪದವನ್ನು ಹೇಗೆ ವ್ಯಾಖ್ಯಾನಿಸುತ್ತೀರಿ ಮತ್ತು ಈ ವಿಭಾಗಕ್ಕೆ ಹೇಗೆ ನಾವು ಸೇರಿಕೊಳ್ಳುತ್ತೀವಿ ಎಂಬುದನ್ನು ಹೇಳಬೇಕು ಎಂದು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರೋಮಿಲಾ ಥಾಪರ್ ಕೇಳಿದ್ದಾರೆ.

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶ ಹಾಗೂ ಎಸ್ಐಟಿ ತನಿಖೆ ವಿಚಾರದ್ದಲಿ ಮಧ್ಯಪ್ರವೇಶಕ್ಕೆ ಸುಪ್ರೀಂಕೋರ್ಟ್ ನಿರಾಕರಿಸಿದ ಬೆನ್ನಲ್ಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಮಿಲಾ ಥಾಪರ್, ಯಾವುದೇ ವಾರೆಂಟ್ ಇಲ್ಲದೆ ಪೊಲೀಸರು ಬಂಧಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com