ಮಧ್ಯಪ್ರದೇಶ: ವಿದ್ಯಾರ್ಥಿನಿಯರು ಅಡುಗೆ ಮನೆ ಬಿಡಬೇಡಿ, ಉದುದ್ದ ಕೂದಲು ಬಿಡಿ :ರಾಜ್ಯಪಾಲೆ ಅನಂದಿಬೆನ್ ಪಟೇಲ್

ಮಧ್ಯಪ್ರದೇಶ ರಾಜ್ಯಪಾಲೆ ಅನಂದಿಬೆನ್ ಪಟೇಲ್ ತಪ್ಪಾದ ಹೇಳಿಕೆಯಿಂದ ಸುದ್ದಿಯಲ್ಲಿದ್ದಾರೆ. ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಆನಂದಿಬೆನ್ ಪಟೇಲ್
ಆನಂದಿಬೆನ್ ಪಟೇಲ್

ಭೂಪಾಲ್ : ಮಧ್ಯಪ್ರದೇಶ ರಾಜ್ಯಪಾಲೆ ಅನಂದಿಬೆನ್ ಪಟೇಲ್ ತಪ್ಪಾದ ಹೇಳಿಕೆಯಿಂದ ಸುದ್ದಿಯಲ್ಲಿದ್ದಾರೆ. ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

 ರಾಜ್ ಘಡದ  ಕಸ್ತೂರ ಬಾ ಬಾಲಕಿಯರ ಹಾಸ್ಟೆಲ್ ನಲ್ಲಿ  ಸಂವಾದ ನಡೆಸಿದ ಗುಜರಾತ್ ಮಾಜಿ ಮುಖ್ಯಮಂತ್ರಿ, ಶಾಲಾ ಬಾಲಕಿಯರ ಶಿಕ್ಷಣ ಸಾಧನೆಯನ್ನು ಶ್ಲಾಘಿಸಿದರು. ಆದರೆ. ಅಡುಗೆ ಮನೆ ಬಿಡಬೇಡಿ,ರುಚಿಕರ ಅಡುಗೆ  ಮಾಡಿ, ಮುಂದೆ ತಮ್ಮ ಅತ್ತೆ ಜೊತೆಯಲ್ಲಿ  ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ ಎಂದು ಹೇಳಿ್ದ್ದಾರೆ.

ಇಷ್ಟಕ್ಕೆ ನಿಲ್ಲಿಸಿಲ್ಲ. ಶಾಲಾ  ಹುಡುಗಿಯರು ಕೂದಲು ಕತ್ತರಿಸುವ ಬದಲು ಉದುದ್ದ ಕೂದಲು ಬಿಡಿ ಇದು ಹುಡುಗಿಯರ ಲಕ್ಷಣ ಎಂದಿದ್ದಾರೆ.

ನಂತರ ಕ್ವಿಜ್ ಮಾಸ್ಟರ್ ಆಗಿ ಬದಲಾದ ರಾಜ್ಯಪಾಲೆ , ದೇಶದ ಪ್ರಧಾನಿ, ರಾಜ್ಯದ ಮಖ್ಯಮಂತ್ರಿ ಯಾರು ಎಂದು ಕೇಳಿದ್ದಾರೆ. ಯಾರೂ ಸರಿಯಾಗಿ ಉತ್ತರ ನೀಡದ ಕಾರಣ ಹಾಸ್ಟೆಲ್ ವಾರ್ಡನ್ ಕರೆಯಿಸಿ ವಿಶೇಷ ತರಗತಿಗಳನ್ನು ಏರ್ಪಾಟು ಮಾಡುವಂತೆ ತಿಳಿಸಿದ್ದಾರೆ. ದೇಶದ ಉನ್ನತ ನಾಯಕರ ಹೆಸರನ್ನು ತಿಳಿಸುವಂತೆ ಸೂಚನೆ ನೀಡಿದ್ದಾರೆ.

ಈ ಹಿಂದೆ ರಾಜಭವನ ಹೊರಗಡೆ ಪ್ರವಾಸಿಗರೊಂದಿಗೆ ಸಂವಾದ ಸಂದರ್ಭದಲ್ಲಿ ಆನಂದಿಬೆನ್ ಪಟಲೇ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು.ಕೆಲ ತಿಂಗಳ ಹಿಂದೆ ಸ್ಥಳೀಯ ಸರ್ಕಾರಿ ಅಧಿಕಾರಿಗಳು ಹಾಗೂ ಬಿಜೆಪಿ ನಾಯಕರೊಂದಿಗೆ ಮಾತನಾಡುವಾಗ ಚುನಾವಣೆಯಲ್ಲಿ ಹೇಗೆ ಗೆಲ್ಲಬೇಕೆಂಬ ಬಗ್ಗೆ ಟಿಪ್ಸ್ ನೀಡಿ ಕ್ಯಾಮಾರ ಕಣ್ಣಿಗೆ ಸೆರೆ ಸಿಕ್ಕಿದ್ದರು.

ಕೇವಲ ಎರಡು ತಿಂಗಳ ಹಿಂದಷ್ಟೇ ಹರ್ದಾ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವಿವಾಹಿತರು ಎಂಬ ಹೇಳಿಕೆ ನೀಡಿ ವಿವಾದ  ಸೃಷ್ಟಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com