ಐಟಿಯಿಂದ ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಗೀಲಾನಿಯ ದೆಹಲಿ ಮನೆ ಜಪ್ತಿ

3.62 ಕೋಟಿ ರುಪಾಯಿ ತೆರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ದೆಹಲಿಯಲ್ಲಿರುವ ಕಾಶ್ಮೀರಿ ಪ್ರತ್ಯೇಕತಾವಾದಿ...
ಸೈಯದ್ ಅಲಿ ಗೀಲಾನಿ
ಸೈಯದ್ ಅಲಿ ಗೀಲಾನಿ
ನವದೆಹಲಿ: 3.62 ಕೋಟಿ ರುಪಾಯಿ ತೆರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ದೆಹಲಿಯಲ್ಲಿರುವ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಸೈಯದ್​ ಅಲಿ ಶಾ ಗೀಲಾನಿ ಮನೆಯನ್ನು ಸೋಮವಾರ ಜಪ್ತಿ ಮಾಡಿದೆ.
ಗೀಲಾನಿಯೂ ಉದ್ದೇಶಪೂರ್ವಕವಾಗಿ ತೆರಿಗೆ ತಪ್ಪಿಸಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಅವರ ದಿಲ್ಲಿಯಲ್ಲಿರುವ ಗೀಲಾನಿ ಮನೆಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಗೀಲಾನಿ ವಿರುದ್ಧ 1996-97 ರಿಂದ 2001-02 ನಡುವಣ ಆರ್ಥಿಕ ವರ್ಷದಲ್ಲಿ 3 ಕೋಟಿ 62 ಲಕ್ಷದ 62 ಸಾವಿರದ 160 ರುಪಾಯಿ ತೆರಿಗೆ ವಂಚಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಳವೀಯಾ ನಗರದಲ್ಲಿರುವ ಗೀಲಾನಿಗೆ ಸೇರಿದ ಒಂದು ಫ್ಲ್ಯಾಟ್​ ಅನ್ನು ಐಟಿ ಕಾಯಿದೆ 222 ಅಡಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. 
ಇದೇ ವೇಳೆ ಹುರಿಯತ್​ ಕಾನ್ಫರೆನ್ಸ್​ ನಾಯಕ ಗೀಲಾನಿ ಈ ಆಸ್ತಿಯನ್ನು ವರ್ಗಾವಣೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಇಲಾಖೆಯು ಸದರಿ ಫ್ಲ್ಯಾಟ್​ ಅನ್ನು ಹರಾಜು ಮೂಲಕ ಮಾರಾಟ ಮಾಡಿ, ತನಗೆ ಬರಬೇಕಿರುವ ತೆರಿಗೆ ಬಾಕಿಯನ್ನು ಚುಕ್ತಾ ಮಾಡಿಕೊಳ್ಳಬಹುದಾಗಿದೆ.
ಈ ಮಧ್ಯೆ, ಜಾರಿ ನಿರ್ದೇಶನಾಲಯವು 14.40 ಲಕ್ಷ ರುಪಾಯಿ ದಂಡ ವಿಧಿಸಿದೆ. 17 ವರ್ಷಗಳ ಹಿಂದಿನ ಪ್ರಕರಣದಲ್ಲಿ 10 ಸಾವಿರ ಅಮೆರಿಕಾ ಡಾಲರ್​ ನಗದನ್ನು ಅಕ್ರಮವಾಗಿ ತಮ್ಮ ಬಳಿ ಹೊಂದಿದ್ದರು. ಇದು ವಿದೇಶಿ ವಿನಿಮಯ ಕಾನೂನಿಗೆ ವಿರುದ್ಧವಾಗಿದೆ ಎಂದು ಇಡಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com