ಎ-ಸ್ಯಾಟ್ ಅಂತರಿಕ್ಷ ತ್ಯಾಜ್ಯದಿಂದ ಬಾಹ್ಯಾಕಾಶ ಕೇಂದ್ರ ಅಥವಾ ಜೀವಸಂಕುಲಕ್ಕೆ ಅಪಾಯವಿಲ್ಲ: ವಿಜ್ಞಾನಿಗಳು

ಭಾರತೀಯ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಉಪಗ್ರಹವನ್ನು ಹೊಡೆದುರುಳಿಸಲು ಎ-ಸ್ಯಾಟ್ ಕ್ಷಿಪಣಿ ...
ಮಾರ್ಚ್ 27ರಂದು ಒಡಿಶಾ ತೀರದ ಡಾ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಉಡಾಯಿಸಲಾದ ಎ-ಸ್ಯಾಟ್ ಕ್ಷಿಪಣಿ
ಮಾರ್ಚ್ 27ರಂದು ಒಡಿಶಾ ತೀರದ ಡಾ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಉಡಾಯಿಸಲಾದ ಎ-ಸ್ಯಾಟ್ ಕ್ಷಿಪಣಿ
Updated on
ಬೆಂಗಳೂರು: ಭಾರತೀಯ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಉಪಗ್ರಹವನ್ನು ಹೊಡೆದುರುಳಿಸಲು ಎ-ಸ್ಯಾಟ್ ಕ್ಷಿಪಣಿ ಪರೀಕ್ಷೆ ನಡೆಸಿದ್ದರ ಬಗ್ಗೆ ಚರ್ಚೆಗಳು ಇನ್ನೂ ನಿಂತಿಲ್ಲ. ಕ್ಷಿಪಣಿ ಪರೀಕ್ಷೆಯಿಂದ ಅಂತರಿಕ್ಷದಲ್ಲಿ ತ್ಯಾಜ್ಯಗಳು ಸಂಗ್ರಹವಾಗಿದ್ದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ(ಐಎಸ್ಎಸ್)ಕ್ಕೆ ಅಪಾಯವಿದೆ ಎಂದು ನಾಸಾ ಸಂಸ್ಥೆಯ ಜಿಮ್ ಬ್ರೈಡ್ ಸ್ಟೈನ್ ಆಕ್ಷೇಪ ವ್ಯಕ್ತಪಡಿಸಿದ್ದು ಈ ಬಗ್ಗೆ ಭಾರತದ ವಿಜ್ಞಾನಿಗಳು ಅದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಸ್ಫೋಟಕ ಸಿಡಿತಲೆಯಿಲ್ಲದೆ ಪ್ರತಿಬಂಧಕ ಗುರುತ್ವಾಕರ್ಷಣ ಶಕ್ತಿಯಿಂದ ಕ್ಷಿಪಣಿಯನ್ನು ಹಾರಿಸಿ ಭೂ ಸ್ಥಿರ ಕಕ್ಷೆಯಿಂದ 300 ಕಿಲೋ ಮೀಟರ್ ಎತ್ತರದಲ್ಲಿರುವ ಉಪಗ್ರಹವನ್ನು ಹೊಡೆದುರುಳಿಸಿದ್ದರಿಂದ ಬಾಹ್ಯಾಕಾಶದಲ್ಲಿ ಉಂಟಾದ ತ್ಯಾಜ್ಯಗಳಿಂದ ಹೇಳುವಷ್ಟು ಅಪಾಯವಿಲ್ಲ, ನಾಸಾ ಸಂಸ್ಥೆಯ ಆಡಳಿತ ವರ್ಗ ಹೇಳಿರುವುದೇ ಹೆಚ್ಚು ಅಪಾಯಕಾರಿ ಎನಿಸುತ್ತದೆ ಎನ್ನುತ್ತಾರೆ ಭಾರತೀಯ ಅಂತರಿಕ್ಷ ವಿಜ್ಞಾನಿಗಳು.
ಭಾರತದ ಮಿಷನ್ ಶಕ್ತಿ ಪರೀಕ್ಷೆಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಶೇಕಡಾ 44ರಷ್ಟು ಅಪಾಯ ಹೆಚ್ಚಿದೆ ಎಂದು ನಾಸಾ ಆಡಳಿತ ಮುಖ್ಯಸ್ಥ ಬ್ರೈಡನ್ಸ್ಟೈನ್ ಹೇಳಿರುವಷ್ಟು ಆತಂಕವಿಲ್ಲ. ಅವರು ನಾಸಾ ಮತ್ತು ಅಮೆರಿಕಾ ಕಾರ್ಯತಂತ್ರ ಕಮಾಂಡ್ ನ ಭಾಗವಾಗಿರುವ ಸಂಯುಕ್ತ ಅಂತರಿಕ್ಷ ಕಾರ್ಯಾಚರಣೆ ಕೇಂದ್ರ ನೀಡಿರುವ ವರದಿಯನ್ನಾಧರಿಸಿ ಹೇಳಿದ್ದರು ಎನ್ನುತ್ತಾರೆ ಪ್ರೊ. ರೊಡ್ಡಮ್ ನರಸಿಂಹ.
ಭಾರತ ತನ್ನ ಕ್ಷಿಪಣಿ ಪರೀಕ್ಷೆಯನ್ನು ಭೂಸ್ಥಿರ ಕಕ್ಷೆಗೆ ಹತ್ತಿರದಲ್ಲಿ ನಡೆಸಿರುವುದರಿಂದ ಬಾಹ್ಯಾಕಾಶದಲ್ಲಿ ಚೂರುಗಳು ಕಾಲಾಂತರದಲ್ಲಿ ಕಣ್ಮರೆಯಾಗಬಹುದು, ಅದೊಂದು ಸಮಾಧಾನದ ವಿಷಯ ಎಂದು ಏಪ್ರಿಲ್ 1ರಂದು ಬ್ರೈಡ್ ಸ್ಟೈನ್ ಮಾಡಿದ್ದ ಭಾಷಣದಲ್ಲಿ ಹೇಳಿದ್ದರು. ನಾಸಾ ಟಿವಿ ಅದನ್ನು ನೇರ ಪ್ರಸಾರ ಮಾಡಿತ್ತು.
ಪರೀಕ್ಷೆಯಿಂದ ಉಂಟಾದ ಕಡಿಮೆ ಭೂಸ್ಥಿರ ಕಕ್ಷೆ ಶಿಲಾಖಂಡರಾಶಿ ಒಂದು ವಾರದಲ್ಲಿ ಹೊರಹಾಕಲ್ಪಡುತ್ತದೆ. ಅವಶೇಷಗಳು ಭೂಮಿಗೆ ಬಿದ್ದರೂ ಇಲ್ಲಿನ ವಾತಾವರಣದಲ್ಲಿ ಸುಟ್ಟುಹೋಗಲಿದೆ ಎನ್ನುತ್ತಾರೆ ವಿಜ್ಞಾನಿಗಳು.ಇದಕ್ಕೆ ಹೋಲಿಸಿದರೆ 2007ರ ಜನವರಿ 11ರಂದು ಚೀನಾದ ಎ-ಸ್ಯಾಟ್ ಕ್ಷಿಪಣಿ ಪರೀಕ್ಷೆಯಿಂದ ಬಾಹ್ಯಾಕಾಶದಲ್ಲಿ ಸುಮಾರು 2 ಸಾವಿರ ಚೂರುಗಳು ಸೃಷ್ಟಿಯಾಗಿದ್ದು ಭೂಮಿಯಿಂದ 865 ಕಿಲೋ ಮೀಟರ್ ಎತ್ತರದಲ್ಲಿ ನಡೆಸಿದ್ದರಿಂದ ಅದರ ಚೂರುಗಳು ಇನ್ನೂ ಭೂಮಿಯ ಸುತ್ತ ಸುತ್ತುತ್ತಲೇ ಇದೆ ಎನ್ನುತ್ತಾರೆ ಡಿಆರ್ ಡಿಒ ವಿಜ್ಞಾನಿಗಳು.
ಐಎಸ್ಎಸ್ ಗೆ ಯಾವುದೇ ಅಪಾಯವಿಲ್ಲ ಎನ್ನುತ್ತಾರೆ ಪ್ರೊ. ರೊಡ್ಡಮ್ ನರಸಿಂಹ. ಭಾರತ ನಡೆಸಿರುವ ಉಪಗ್ರಹ ಹೊಡೆದ ಎತ್ತರ ಐಎಸ್ಎಸ್ ಗಿಂತ ಬಹಳ ತಗ್ಗಿನಲ್ಲಿದೆ. ಅಂತರಿಕ್ಷದಲ್ಲಿ ಚೂರುಗಳ ತ್ಯಾಜ್ಯಗಳು ಸೃಷ್ಟಿಯಾಗಿವೆ ನಿಜ. ಆದರೆ ಅಮೆರಿಕಾ, ಚೀನಾ, ರಷ್ಯಾ ದೇಶಗಳಿಗೆ ಹೋಲಿಸಿದರೆ ಭಾರತದ್ದು ಅತ್ಯಂತ ಕಡಿಮೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com