ಕೆಸಿ ವ್ಯಾಲಿ ಯೋಜನೆ ತಡೆಯಾಜ್ಞೆ ತೆರವುಗೂಳಿಸಿದ ಸುಪ್ರೀಂ ಕೋರ್ಟ್

ಬರಪೀಡಿತ ಜಿಲ್ಲೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಬೆಂಗಳೂರಿನಿಂದ ಕಲುಷಿತ ನೀರನ್ನು ಶುದ್ದೀಕರಿಸಿ ಒದಗಿಸುವ ಕೆಸಿ ವ್ಯಾಲಿ ಯೋಜನೆಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ.
ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ
ನವದೆಹಲಿ: ಬರಪೀಡಿತ ಜಿಲ್ಲೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಬೆಂಗಳೂರಿನಿಂದ ಕಲುಷಿತ ನೀರನ್ನು ಶುದ್ದೀಕರಿಸಿ ಒದಗಿಸುವ ಕೆಸಿ ವ್ಯಾಲಿ ಯೋಜನೆಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. 
ಪ್ರಕರಣ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ಮುಂದುವರಿಸಬೇಕು. ಹೈಕೋರ್ಟ್ ವಿಚಾರಣೆ ಮುಗಿಯುವವರೆಗೆ ಯೋಜನೆಯ ಮುಂದುವರಿಕೆಗೆ ಯಾವುದೇ ಅಡ್ಡಿ ಇಲ್ಲ ಎಂದು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಶುಕ್ರವಾರ ಹೇಳಿದೆ.
ಕೋಲಾರ, ಚಿಕ್ಕಬಳ್ಳಾಪುರಗಳಿಗೆ ಕೆಸಿ ವ್ಯಾಲಿ ನೀರನ್ನು ಹರಿಸುವುದನ್ನು ಪ್ರಶ್ನಿಸಿ ಶಾಶ್ವತ ನೀರಾವರಿ ಯೋಜನೆ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.
ರಾಜ್ಯ ಹೈಕೋರ್ಟ್ ಯೋಜನೆ ಜಾರಿಗೆ ಅನುಮತಿಸಿದ್ದು ಪ್ರಶ್ನಿಸಿ ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಇದೀಗ ನ್ಯಾಯಾಲಯ ಹೈಕೋರ್ಟ್ ನಲ್ಲಿ ವಿಚಾರಣೆಗೆ ಅನುಮತಿಸಿದೆ. 
ಇದಕ್ಕೆ ಮುನ್ನ ಯೋಜನೆ ಜಾರಿ ಕುರಿತಂತೆ ವಾದ ಮಂಡಿಸಿದ ರಾಜ್ಯ ಸರ್ಕಾರದ ಪರ ವಕೀಲರು "ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನೀರಿನ ಕೊರತೆ ಇದೆ ಕೆಸಿ ವ್ಯಾಲಿ ನೀರಿ ಒಮ್ಮೆ ಭೂಮಿಗೆ ಸೇರಿಕೊಂಡ ಬಳಿಕ ನೈಸರ್ಗಿಕವಾಗಿ ಶುದ್ದವಾಗಲಿದೆ. ಹಾಗಾಗಿ ಆತಂಕ ಪಡಬೇಕಾಗಿಲ್ಲ ಎಂದು ವಾದಿಸಿದ್ದರು. ವಕೀಲರ ವಾದಕ್ಕೆ ಮನ್ನಣೆ ನಿಡಿದ ಕೋರ್ಟ್ ತಡೆಯಾಜ್ಞೆಯನ್ನು ತೆರವುಗೊಳಿಸಿ ಹೈಕೋರ್ಟ್ ನಲ್ಲಿ ತುರ್ತು ವಿಚಾರಣೆಗೆ ಅರ್ಜಿ ಸಲ್ಲಿಸಲು ಅನುಮತಿಸಿದೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com