ಎನ್ ಸಿ, ಪಿಡಿಪಿಗೆ ಕಿವಿ ಹಿಂಡಿದ ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲೀಕ್

ಜಮ್ಮು-ಕಾಶ್ಮೀರ- ಭಾರತ ನಡುವಿನ ಸಂಬಂಧ ಕಡಿದುಕೊಳ್ಳುವ ಎಚ್ಚರಿಕೆ ನೀಡುತ್ತಿರುವ ಸ್ಥಳೀಯ ಪಕ್ಷಗಳಿಗೆ ರಾಜ್ಯಪಾಲ ಸತ್ಯಪಾಲ್ ಮಲೀಕ್ ಕಿವಿ ಹಿಂಡಿದ್ದಾರೆ.
ಎನ್ ಸಿ, ಪಿಡಿಪಿಗೆ ಕಿವಿ ಹಿಂಡಿದ ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲೀಕ್
ಎನ್ ಸಿ, ಪಿಡಿಪಿಗೆ ಕಿವಿ ಹಿಂಡಿದ ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲೀಕ್
ಶ್ರೀನಗರ: ಜಮ್ಮು-ಕಾಶ್ಮೀರ- ಭಾರತ ನಡುವಿನ ಸಂಬಂಧ ಕಡಿದುಕೊಳ್ಳುವ ಎಚ್ಚರಿಕೆ ನೀಡುತ್ತಿರುವ ಸ್ಥಳೀಯ ಪಕ್ಷಗಳಿಗೆ ರಾಜ್ಯಪಾಲ ಸತ್ಯಪಾಲ್ ಮಲೀಕ್ ಕಿವಿ ಹಿಂಡಿದ್ದಾರೆ. 
ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಆರ್ಟಿಕಲ್ 370 ನ್ನು ರದ್ದುಗೊಳಿಸಿದರೆ ಜಮ್ಮು-ಕಾಶ್ಮೀರ ಭಾರತದ ಜೊತೆಗಿನ  ಸಂಬಂಧ ತೊರೆಯುವುದರ ಬಗ್ಗೆ ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಇತ್ತೀಚಿನ ದಿನಗಳಲ್ಲಿ ಎಚ್ಚರಿಕೆ ನೀಡುತ್ತಿವೆ. 
ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಎರಡೂ ಪಕ್ಷಗಳ ಕಿವಿ ಹಿಂಡಿದ್ದು, ರಾಜ್ಯದ ಶಾಂತಿಗೆ ಧಕ್ಕೆ ತರುವ ಅಂಶಗಳನ್ನು ಮುಕ್ ಪ್ರಸ್ತಾಪಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. 
ರಾಜಕೀಯ ವಿಷಯಗಳು ಚುನಾವಣಾ ವಿಷಯಗಳನ್ನು ಮಾತನಾಡಲಿ, ಆದರೆ ಭಯೋತ್ಪಾದನೆಯನ್ನು, ಪ್ರತ್ಯೇಕತಾವಾದವನ್ನು ಉತ್ತೇಜಿಸುವ, ರಾಜ್ಯದ ಶಾಂತಿಗೆ ಧಕ್ಕೆ ತರುವ ವಿಷಯಗಳನ್ನು ಪ್ರಸ್ತಾಪಿಸದಂತೆ ಮುಖ್ಯವಾಹಿನಿಯಲ್ಲಿರುವ ರಾಜಕೀಯಪಕ್ಷಗಳಿಗೆ ಸಲಹೆ ನೀಡುತ್ತೇನೆ ಎಂದು ರಾಜ್ಯಪಾಲ ಸತ್ಯಪಾಲ್ ಮಲೀಕ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com