ಅಮೆರಿಕದ ನಿಯತಕಾಲಿಕೆ ವರದಿಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಭಾರತದ ಆಡಳಿತಾರೂಢ ಪಕ್ಷದ ವಿರುದ್ಧ ಆರೋಪ ಮಾಡಿದ್ದಾರೆ. ಸತ್ಯ ಎಂದಿಗೂ ಗೆಲ್ಲುತ್ತದೆ, ಅದೇ ಅತ್ಯುನ್ನತ ತತ್ವ. ಬಿಜೆಪಿ ಯುದ್ಧೋನ್ಮಾದ ಸ್ಥಿತಿಯನ್ನು ನಿರ್ಮಿಸುವ ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ. ಪಾಕಿಸ್ತಾನದ ಎಫ್-16 ನ್ನು ಹೊಡೆದುರುಳಿಸಿದ್ದೇವೆ ಎಂದು ಬಿಜೆಪಿ ನೇತೃತ್ವದ ಸರ್ಕಾರ ಹೇಳಿತ್ತು. ಆದರೆ ಅಮೆರಿಕ ಸೇನಾ ಅಧಿಕಾರಿಗಳು ಇದಕ್ಕೆ ತದ್ವಿರುದ್ಧವಾಗಿ ಹೇಳಿಕೆ ನೀಡಿದ್ದು, ಬಿಜೆಪಿಗೆ ಇದು ತಿರುಗುಬಾಣವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.