ವಾರಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ನಿವೃತ್ತ ನ್ಯಾಯಮೂರ್ತಿ ಸಿಎಸ್ ಕರ್ಣನ್!

ನಾನು ಮೋದಿ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಹೇಳುತ್ತಿರುವವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಅದೇ ಸಾಲಿಗೆ ಇದೀಗ ಜೈಲುವಾಸ ಅನುಭವಿಸಿದ ಮೊದಲ ಹೈಕೋರ್ಟ್...
ಸಿಎಸ್ ಕರ್ಣನ್-ನರೇಂದ್ರ ಮೋದಿ
ಸಿಎಸ್ ಕರ್ಣನ್-ನರೇಂದ್ರ ಮೋದಿ
ನವದೆಹಲಿ: ನಾನು ಮೋದಿ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಹೇಳುತ್ತಿರುವವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಅದೇ ಸಾಲಿಗೆ ಇದೀಗ ಜೈಲುವಾಸ ಅನುಭವಿಸಿದ ಮೊದಲ ಹೈಕೋರ್ಟ್ ನ್ಯಾಯಾಧೀಶ ಎನ್ನುವ ಕುಖ್ಯಾತಿಗೆ ಪಾತ್ರರಾಗಿರುವ ಸಿಎಸ್ ಕರ್ಣನ್ ಅವರು ಇದೀಗ ವಾರಣಾಸಿಯಿಂದ ಕಣಕ್ಕೆ ಇಳಿಯುವುದಾಗಿ ಹೇಳಿದ್ದಾರೆ.
ನಿವೃತ್ತ ಬಿಎಸ್ಪಿ ಕಾನ್ ಸ್ಟೇಬಲ್ ತೇಜ್ ಯಾದವ್ ಮತ್ತು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅಚ್ಚರಿ ಎಂದರೆ, ಕರ್ಣನ್ ಈಗಾಗಲೇ ಕೇಂದ್ರ ಚೆನ್ನೈನಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಎರಡನೇ ಕ್ಷೇತ್ರವಾಗಿ ವಾರಣಾಸಿಯನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.
ಸಿಎಸ್ ಕರ್ಣನ್ ಅವರು 2018ರ ಮೇ ತಿಂಗಳಲ್ಲಿ ಆ್ಯಂಟಿ ಕರಪ್ಶನ್ ಡೈನಾಮಿಕ್ ಪಾರ್ಟಿ ಹೆಸರಿನ ಪಕ್ಷವನ್ನು ಸ್ಥಾಪಿಸಿದ್ದರು. ಕರ್ಣನ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಮೂಲಕ ಜೈಲು ಶಿಕ್ಷೆ ಅನುಭವಿಸಿದ್ದರು. ನಾನು ದಲಿತ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com