ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅ

ಸೇನಾಪಡೆ ಸಾಹಸ ಚುನಾವಣಾ ಲಾಭಕ್ಕೆ ಬಳಕೆ: ಕ್ರಮಕ್ಕೆ ಆಗ್ರಹಿಸಿ ಮಾಜಿ ಸೈನಿಕರಿಂದ ರಾಷ್ಟ್ರಪತಿಗೆ ಪತ್ರ

ಸಶಸ್ತ್ರಪಡೆಗಳ ಸಾಹಸವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಈ ಸಂಬಂಧ ಕ್ರಮ ಕೈಗೊಳ್ಲಬೇಕೆಂದು ಎಂಟು ಮಾಜಿ ಸೇವಾ ಮುಖ್ಯಸ್ಥರು ಮತ್ತು 148 ಇತರ ಮಿಲಿಟರಿ....
ನವದೆಹಲಿ: ಸಶಸ್ತ್ರಪಡೆಗಳ ಸಾಹಸವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಈ ಸಂಬಂಧ ಕ್ರಮ ಕೈಗೊಳ್ಲಬೇಕೆಂದು ಎಂಟು  ಮಾಜಿ ಸೇವಾ ಮುಖ್ಯಸ್ಥರು ಮತ್ತು 148 ಇತರ ಮಿಲಿಟರಿ ಪರಿಣತರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಭರತೀಯ ಸೇನೆಯ ಮಾಜಿ ಮುಖ್ಯಸ್ಥರಾದ  ಜನರಲ್ (ನಿವೃತ್ತ) ಎಸ್.ಎಫ್ ರೋಡ್ರಿಗಸ್, , ಜನರಲ್ (ನಿವೃತ್ತ) ಶಂಕರ್ ರಾಯ್ ಚೌಧರಿ ಮತ್ತು ಜನರಲ್ (ನಿವೃತ್ತ) ದೀಪಕ್ ಕಪೂರ್, ಮಾಜಿ ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ (ನಿವೃತ್ತ) ಎನ್ಸಿ ಸೂರಿ ಸೇರಿದಂತೆ ಅನೇಕರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
ಅಡ್ಮಿರಲ್ (ನಿವೃತ್ತ) ಎಲ್ ರಾಮದಾಸ್, ಅಡ್ಮಿರಲ್ (ನಿವೃತ್ತ) ಅರುಣ್ ಪ್ರಕಾಶ್, ಅಡ್ಮಿರಲ್ (ನಿವೃತ್ತ) ಮೆಹ್ತಾ ಮತ್ತು ಅಡ್ಮಿರಲ್ (ನಿವೃತ್ತ) ವಿಷ್ಣು ಭಾಗವತ್ಹ ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
ಭಾರತೀಯ ಸೇನೆ ನಡೆಸಿದ ವಾಯುದಾಳಿಯಂತಹಾ ಆಕ್ರಮಣಗಳನ್ನು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರದ ವಸ್ತುವಾಗಿ ಬಳಸಿಕೊಳ್ಳುತ್ತಿವೆ. ಅಲ್ಲದೆ ಸಶಸ್ತ್ರ ಪಡೆಗಳನ್ನು "ಮೋದಿಜಿ ಸೇನೆ: ಎಂದೂ ಕರೆಯುತ್ತಿದ್ದಾರೆ.  ಇದು ಅನುಚಿತವಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಉತ್ತರ ಪ್ರದೇಶದ ರ್ಯಾಲಿಯೊಂದರಲ್ಲಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಸಶಸ್ತ್ರ ಪಡೆಗಳನ್ನು "ಮೊಡಿಜಿ ಕೀ ಸೇನಾ" ಎಂದು ಉಲ್ಲೇಖಿಸಿದ್ದಾರೆ. ಇದು ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಚುನಾವಣಾ ಆಯೋಗ ಸಹ ಯೋಗಿ ಅವರ ಈ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿತ್ತು.
ಈ ಪತ್ರದಲ್ಲಿ, ಚುನಾವಣಾ ಪ್ರಚಾರದಲ್ಲಿ ಭಾರತೀಯ ಏರ್ ಫೋರ್ಸ್ ಪೈಲಟ್ ಅಭಿನಂದನ್ ವರ್ತಮಾನ್ ಸೇರಿ ಇತರೆ ಸೈನಿಕರ ಭಾವಚಿತ್ರಗಳನ್ನು ಬಳಸಿಕೊಳ್ಳುವುದನ್ನು ಸಹ ಸೈನಿಕರು ವಿರೋಧಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com