ಸಾಧ್ವಿ ಪ್ರಗ್ಯಾ ಸಿಂಗ್
ದೇಶ
ಹೇಮಂತ ಕರ್ಕರೆ ಸಾವಿನ ಬಗ್ಗೆ ಸಾಧ್ವಿ ಪ್ರಗ್ಯಾ ಸಿಂಗ್ ಹೇಳಿಕೆ ವೈಯಕ್ತಿಕ ವಿಚಾರ: ಬಿಜೆಪಿ
ಮುಂಬೈ ದಾಳಿಯಲ್ಲಿ ಹುತಾತ್ಮರಾದ ಐಪಿಎಸ್ ಅಧಿಕಾರಿ ಹೇಮಂತ ಕರ್ಕರೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಂದ...
ಭೋಪಾಲ್: ಮುಂಬೈ ದಾಳಿಯಲ್ಲಿ ಹುತಾತ್ಮರಾದ ಐಪಿಎಸ್ ಅಧಿಕಾರಿ ಹೇಮಂತ ಕರ್ಕರೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಂದ ಅಂತರ ಕಾಯ್ದುಕೊಂಡ ಬಿಜೆಪಿ, ಅದು ಅವರ ವೈಯಕ್ತಿಕ ವಿಚಾರ. ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ಹಾಗೆ ಹೇಳಿರಬಹುದು ಎಂದು ಸ್ಪಷ್ಟಪಡಿಸಿದೆ.
ಉಗ್ರರ ವಿರುದ್ಧದ ಹೋರಾಟದಲ್ಲಿ ಕರ್ಕರೆ ಅವರು ಹುತಾತ್ಮರಾಗಿದ್ದಾರೆ ಎಂದು ಬಿಜೆಪಿ ಭಾವಿಸಿದೆ. ಅವರು ಒಬ್ಬ ಹುತಾತ್ಮ ಎಂದು ಬಿಜೆಪಿ ಪರಿಗಣಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೂಲಕ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ.
ಪ್ರಗ್ಯಾ ಸಿಂಗ್ ಅವರು ಹಲವು ವರ್ಷಗಳ ಕಾಲ ಪೊಲೀಸ್ ವಶದಲ್ಲಿದ್ದರು. ಈ ವೇಳೆ ತಮಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲಾಗಿದೆ ಎಂದು ಹೇಳಿದ್ದಾರೆ. ಇದು ಕರ್ಕರೆ ವಿರುದ್ಧ ಹೇಳಿಕೆ ನೀಡಲು ಕಾರಣವಾಗಿರಬಹುದು ಮತ್ತು ಅದು ವೈಯಕ್ತಿಕ ವಿಚಾರ ಎಂದು ಬಿಜೆಪಿ ತಿಳಿಸಿದೆ.
ಕರ್ಕರೆ ಅವರಿಗೆ ನಾನು ಶಾಪ ಹಾಕಿದ್ದೆ. ನನ್ನ ಶಾಪದಿಂದ ಹಾಗೂ ಅವರ ಕರ್ಮದಿಂದ ಮೃತಪಟ್ಟಿದ್ದಾರೆ ಎಂದು 2008ರ ಮಾಲೆಗಾಂವ್ ನ್ಪೋಟ ಪ್ರಕರಣದ ಆರೋಪಿ, ಭೋಪಾಲ್ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಹೇಳಿದ್ದರು.

