ನವಜೋತ್ ಸಿಂಗ್ ಸಿಧು
ದೇಶ
ನಿಮ್ಮ ಒಂದು ತಪ್ಪು ಮತ ನಿಮ್ಮ ಮಕ್ಕಳನ್ನ ಚಾಯ್ ವಾಲಾ, ಪಕೋಡಾ ವಾಲಾರನ್ನಾಗಿಸುತ್ತದೆ: ಸಿಧು
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ನಾಯಕ ನವ್ ಜೋತ್ ಸಿಂಗ್ ಸಿಧು, ತಪ್ಪು ಮತ ನಿಮ್ಮ ಮಕ್ಕಳನ್ನು ...
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ನಾಯಕ ನವ್ ಜೋತ್ ಸಿಂಗ್ ಸಿಧು, ತಪ್ಪು ಮತ ನಿಮ್ಮ ಮಕ್ಕಳನ್ನು ಚಾಯ್‌ವಾಲಾರನ್ನಾಗಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ತಪ್ಪು ಮತ ಎನ್ನುವುದು ನಿಮ್ಮ ಮಕ್ಕಳನ್ನು ಚಾಯ್‌ವಾಲಾ, ಪಕೋಡಾವಾಲಾ ಮತ್ತು ಚೌಕೀದಾರ್ ನನ್ನಾಗಿಸುತ್ತದೆ. ಪಶ್ಚಾತ್ತಾಪ ಮತ್ತು ದುರಸ್ತಿ ಮಾಡುವ ಬದಲು ತಡೆಯಿರಿ ಮತ್ತು ತಯಾರಾಗಿರಿ ಎಂದು ಬರೆದಿದ್ದಾರೆ.
ಸಿಧು ಟ್ವೀಟ್‌ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು ವಂಶಪರಂಪರೆಯ ಆಳ್ವಿಕೆಯಿರುವ ಕಾಂಗ್ರೆಸ್ ಸಾಮಾನ್ಯ ವ್ಯಕ್ತಿಗಳಿಗೆ ಸಂಬಂಧಿಸಿದ್ದಲ್ಲ ಎಂದು ತಿರುಗೇಟು ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ