ನೀನು ನನ್ನ ಹಿಟ್ ಲಿಸ್ಟ್ ನಲ್ಲಿದ್ದೀಯಾ: ಸರ್ಕಲ್ ಇನ್ಸ್ ಪೆಕ್ಟರ್ ಗೆ ಬಿಜೆಪಿ ಮುಖಂಡನ ಆವಾಜ್!

ಮತದಾನದ ವೇಳೆ ಬಿಜೆಪಿ ಮುಖಂಡ ಹಾಗೂ ಪೊಲೀಸ್ ಅಧಿಕಾರಿ ಮಧ್ಯೆ ವಾಗ್ವಾದ ನಡೆದಿದ್ದು, ಈ ವೇಳೆ ಬಿಜೆಪಿ ಮುಖಂಡ ಅಧಿಕಾರಿಗೆ ಬೆದರಿಕೆ ಹಾಕಿದ ಘಟನೆ ...
ಬೆದರಿಕೆ ಹಾಕುತ್ತಿರುವ ಬಿಜೆಪಿ ಮುಖಂಡ
ಬೆದರಿಕೆ ಹಾಕುತ್ತಿರುವ ಬಿಜೆಪಿ ಮುಖಂಡ
ಕಾನ್ಪುರ: ಮತದಾನದ ವೇಳೆ ಬಿಜೆಪಿ ಮುಖಂಡ ಹಾಗೂ ಪೊಲೀಸ್ ಅಧಿಕಾರಿ ಮಧ್ಯೆ ವಾಗ್ವಾದ ನಡೆದಿದ್ದು, ಈ ವೇಳೆ ಬಿಜೆಪಿ ಮುಖಂಡ ಅಧಿಕಾರಿಗೆ ಬೆದರಿಕೆ ಹಾಕಿದ ಘಟನೆ ಕಾನ್ಪುರದಲ್ಲಿ ನಡೆದಿದೆ
ಪೊಲೀಸ್ ಅಧಿಕಾರಿಗೆ ಬಿಜೆಪಿ ಮುಖಂಡ ಬೆದರಿಕೆ ಹಾಕುತ್ತಿರುವುದನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬಿಜೆಪಿ ಮುಖಂಡ ಸುರೇಶ್ ಅವಾಸ್ಥಿ, ನೀನು ನನ್ನ ಹಿಟ್ ಲಿಸ್ಟ್ ನಲ್ಲಿದ್ದೀಯಾ. ನಿನ್ನನ್ನು ನಾಳೆ ನೋಡಿಕೊಳ್ಳುತ್ತೇನೆ ಎಂದು ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ.
ಘಟನೆಯ ವೇಳೆ ಮೇಯರ್ ಪ್ರಮಿಳಾ ಪಾಂಡೆ ಹಾಗೂ ಇತರ ಬಿಜೆಪಿ ನಾಯಕರು ಸ್ಥಳದಲ್ಲಿದ್ದರು. ಆದರೆ ಅವರು ಬೆದರಿಕೆ ಹಾಕುವ ಬಿಜೆಪಿ ನಾಯಕನ್ನು ತಡೆಯುವ ಪ್ರಯತ್ನ ಮಾಡದಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com