ಕಾಂಗ್ರೆಸ್ ಮುಂದಿನ ಅಧ್ಯಕ್ಷರ ಆಯ್ಕೆ: ಸಭೆ ಮಧ್ಯೆ ಎದ್ದು ಹೋದ ಸೋನಿಯಾ,ರಾಹುಲ್ 

ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷರ ಆಯ್ಕೆ ಸಂಬಂಧ ಸಮಾಲೋಚಿಸಲು ಇಂದು ಆರಂಭವಾದ ಪಕ್ಷದ ಕಾರ್ಯಕಾರಿಣಿ ಸಮಿತಿ ಸಭೆಯ ಮಧ್ಯೆಯೇ  ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ನಿರ್ಗಮಿತ ಅಧ್ಯಕ್ಷ ರಾಹುಲ್ ಗಾಂಧಿ ಎದ್ದು ಹೋಗಿರುವ ಘಟನೆ ನಡೆದಿದೆ.
ಕಾಂಗ್ರೆಸ್ ಮುಂದಿನ ಅಧ್ಯಕ್ಷರ ಆಯ್ಕೆ: ಸಭೆ ಮಧ್ಯೆ ಎದ್ದು ಹೋದ ಸೋನಿಯಾ,ರಾಹುಲ್ 

ನವದೆಹಲಿ: ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷರ ಆಯ್ಕೆ ಸಂಬಂಧ ಸಮಾಲೋಚಿಸಲು ಇಂದು ಆರಂಭವಾದ ಪಕ್ಷದ ಕಾರ್ಯಕಾರಿಣಿ ಸಭೆಯ ಮಧ್ಯೆಯೇ  ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ನಿರ್ಗಮಿತ ಅಧ್ಯಕ್ಷ ರಾಹುಲ್ ಗಾಂಧಿ ಎದ್ದು ಹೋಗಿರುವ ಘಟನೆ ನಡೆದಿದೆ. ಈ ಪ್ರಕ್ರಿಯೆಯಲ್ಲಿ ತಾವೂ ಭಾಗಿಯಾಗುವುದಿಲ್ಲ ಎಂದು ಸಭೆಯಿಂದ ಹೊರಬಂದ ಬಳಿಕ ಸೋನಿಯಾ ಗಾಂಧಿ ಹೇಳಿದ್ದಾರೆ. 

ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ತಾವೂ ಭಾಗಿಯಾಗುವುದಿಲ್ಲ ಎಂದು ಸಭೆಯಿಂದ ಹೊರಬಂದ ಬಳಿಕ ಸೋನಿಯಾ ಗಾಂಧಿ ಹೇಳಿದ್ದಾರೆ. ಸೋನಿಯಾಗಾಂಧಿ ಹೊರಬಂದ ಕೂಡಲೇ  ರಾಹುಲ್ ಗಾಂಧಿ ಕೂಡಾ ಹೊರಬಂದಿದ್ದಾರೆ. ಪ್ರವಾಹದಿಂದ ತತ್ತರಿಸಿರುವ ಸ್ವಕ್ಷೇತ್ರ ಕೇರಳದ ವೈನಾಡು ಪ್ರದೇಶಕ್ಕೆ ಭೇಟಿ ನೀಡಬೇಕಾಗಿದೆ ಎಂದು ಅವರು ಸಮಾಜಾಯಿಸಿ ನೀಡಿದ್ದಾರೆ.

ಹೊಸ ಅಧ್ಯಕ್ಷರ ಆಯ್ಕೆಗಾಗಿ ಸಮಾಲೋಚಿಸಲು  ಪ್ರಾದೇಶಿಕವಾರು ರಚಿಸಲಾಗಿರುವ ಸಮಿತಿಯಿಂದಲೂ ತಮ್ಮ ಹೆಸರನ್ನು ತೆಗೆಯಲಾಗಿದೆ ಎಂದು ಸೋನಿಯಾಗಾಂಧಿ ಹೇಳಿದ್ದಾರೆ. ಈಶಾನ್ಯ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಎಂದು ವಿವಿಧ ಪ್ರದೇಶಗಳನ್ನು ಐದು ಗುಂಪುಗಳಾಗಿ ವಿಂಗಡಿಸಲಾಗಿದ್ದು,ದೇಶದ ನಾಯಕರೊಂದಿಗೆ ಪಕ್ಷದ ಕಾರ್ಯಕಾರಿಣಿ ಸಭೆ ಸಮಾಲೋಚನೆ ನಡೆಸಲು ನಿರ್ಧರಿಸಿದೆ. 

ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲಿನ ಬಳಿಕ ರಾಹುಲ್ ಗಾಂಧಿ ಗಾಂಧಿ ಕುಟುಂಬದ ಹೊರಗಿನವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಪಕ್ಷದ ಕಾರ್ಯಕಾರಿಣಿ ಸಮಿತಿಗೆ ತಿಳಿಸಿ, ಮೇ 25 ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com