ಜೆಎನ್‌ಯು ಹೆಸರನ್ನು ಮೋದಿ ನರೇಂದ್ರ ವಿಶ್ವವಿದ್ಯಾನಿಲಯ ಎಂದು ಬದಲಿಸಿ: ಬಿಜೆಪಿ ಸಂಸದ
ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯವನ್ನು (ಜೆಎನ್‌ಯು ಹೆಸರನ್ನು ಬದಲಿಸಿ ಮೋದಿ ನರೇಂದ್ರ ವಿಶ್ವವಿದ್ಯಾನಿಲಯ (ಎಂಎನ್‌ಯು) ಎಂದು ಮರುನಾಮಕರಣ ಮಾಡಬೇಕೆಂದು ಹೇಳುವ ಮೂಲಕ ಬಿಜೆಪಿ ಸಂಸದ ಮತ್ತು ಕಲಾವಿದರಾದ ಹನ್ಸ್ ರಾಜ್ ಹನ್ಸ್ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.
ಏಕ್ ಶಾಮ್ ಶಹೀದಾನ್ ಕೆ ನಾಮ್' ಎಂಬ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಮಾತನಾಡಿದ ದೆಹಲಿ ವಾಯುವ್ಯ ಕ್ಷೇತ್ರದ ಸಂಸದ ಕಾಶ್ಮೀರ ವಿವಾದದ ಬಗೆಗೆ ಮಾತನಾಡುತ್ತಾ ನೆಹರೂ-ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದರು.
"ನಮ್ಮ ಹಿರಿಯರು ಮಾಡಿದ ತಪ್ಪುಗಳ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ. ನಾವೆಲ್ಲರೂ ಶಾಂತಿಯಿಂದ ಬದುಕಬೇಕು, ಬಾಂಬ್ ಸ್ಪೋಟದಂತಹ ದುರ್ಘಟನೆಗಳು ಸಂಭವಿಸಲು ಬಿಡಬಾರದು. ಹಾಗಾಗಿ ಪ್ರಧಾನಿ ಮೋದಿಯವರ ಹೆಸರನ್ನು ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯಕ್ಕೆ ಇಡಬೇಕಿದೆ. ಜೆಎನ್‌ಯು ಅನ್ನು ಎಂಎನ್‌ಯು ಎಂದು ಮರುನಾಮಕರಣ ಮಾಡಬೇಕೆಂದು ನಾನು ಹೇಳುತ್ತೇನೆ" ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಜವಾಹರಲಾಲ್ ನೆಹರೂ ಅವರು ಈ ಹಿಂದೆ (ಜಮ್ಮು ಕಾಶ್ಮೀರ ವಿಚಾರವಾಗಿ)ತಪ್ಪುಗಳನ್ನು ಮಾಡಿದ್ದಾರೆ ಎಂದು ಹೇಳಿದರು. ವಿಶ್ವವಿದ್ಯಾನಿಲಯ ಹೆಸರು ಮರುನಾಮಕರಣ ಪ್ರಸ್ತಾಪವನ್ನು ಮಾಡಿದ ಅವರು "ನಾನು ಮೊದಲ ಬಾರಿಗೆ ಜೆಎನ್‌ಯುಗೆ ಬಂದಿದ್ದೇನೆ ... ಜೆಎನ್‌ಯು ಬಗ್ಗೆ ಸಾಕಷ್ಟು ಕೇಳಿದ್ದೇನೆ ಆದರೆ ಈಗ ಮೋದಿ ಸರ್ಕಾರ ಮಾಡಿದ ಪ್ರಯತ್ನದಿಂದಾಗಿ ಬದಲಾವಣೆಗಳು ಆಗುತ್ತಿದೆ. ಪ್ರಧಾನಿ ಮೋದಿ ರಾಷ್ಟ್ರಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ.ಅವರ ಕೆಲಸಗಳಿಗೆ ಗೌರವವಾಗಿ ಜೆಎನ್‌ಯು ಅನ್ನುನರೇಂದ್ರ ವಿಶ್ವವಿದ್ಯಾನಿಲಯ ' ಎಂದು ಮರುನಾಮಕರಣ ಮಾಡಬೇಕೆಂದು ಹೇಳುತ್ತೇನೆ" ಎಂದಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹನ್ಸ್ ರಾಜ್ ಅವರೊಂದಿಗೆ ಪ್ರದರ್ಶನ ನೀಡಿದ ಬಿಜೆಪಿ ಶಾಸಕ ಮನೋಜ್ ತಿವಾರಿ ಕೂಡ ಇದಕ್ಕೆ ಅನುಮೋದನೆ ನಿಡಿದ್ದಾರೆ."ಹನ್ಸ್ ರಾಜ್ಮೋದಿ ಜಿ ಅವರನ್ನು ಮೆಚ್ಚುವ ಕಾರಣ ಅವರು ಹಾಗೆ ಹೇಳಿದರು" ಎಂದು ತಿವಾರಿ ಹೇಳಿದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮತ್ತೆ ಭಾರತಕ್ಕೆ ಸೇರ್ಪಡಿಸಲು ಕೇಂದ್ರವು ಕ್ರಮ ಕೈಗೊಳ್ಳಲಿದೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥರು ಹೇಳಿದ್ದಾರೆ..
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ