ತಂಬಾಕು ಉತ್ಪನ್ನಗಳ ಮೇಲೆ ಹೊಸ ಆರೋಗ್ಯ ಎಚ್ಚರಿಕೆ ಸಂದೇಶ - ಸೆಪ್ಟೆಂಬರ್ 1 ರಿಂದ ಜಾರಿ

ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಪೊಟ್ಟಣಗಳ ಮೇಲೆ ನಿರ್ದಿಷ್ಟ ಆರೋಗ್ಯದ ಎಚ್ಚರಿಕೆ ನಿಯಮಾವಳಿಗಳು 2018 ಸೆಪ್ಟೆಂಬರ್ 1 ರಿಂದಲೇ ಅನ್ವಯವಾಗುವಂತೆ ಜಾರಿಗೆ ಬರಲಿದೆ ಎಂದು ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಪೊಟ್ಟಣಗಳ ಮೇಲೆ ನಿರ್ದಿಷ್ಟ ಆರೋಗ್ಯದ ಎಚ್ಚರಿಕೆ ನಿಯಮಾವಳಿಗಳು 2018 ಸೆಪ್ಟೆಂಬರ್ 1 ರಿಂದಲೇ ಅನ್ವಯವಾಗುವಂತೆ ಜಾರಿಗೆ ಬರಲಿದೆ ಎಂದು ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ

ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ನಿಯಮಗಳು, 2008 ರಲ್ಲಿ ತಿದ್ದುಪಡಿ ಮಾಡುವ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ತಂಬಾಕು ಉತ್ಪನ್ನಗಳಿಗೆ ನಿರ್ದಿಷ್ಟಪಡಿಸಿದ ಆರೋಗ್ಯ ಎಚ್ಚರಿಕೆಗಳನ್ನು ತಿಳಿಸಿದೆ

ನಿಗದಿತ ಆರೋಗ್ಯ ಎಚ್ಚರಿಕೆ ಜಾರಿಗೆ ಬರುವ ದಿನಾಂಕದೊಂದಿಗೆ ಎರಡು ಚಿತ್ರಗಳನ್ನು ಸೂಚಿಸಲಾಗಿದೆ, ಪ್ರಾರಂಭದ ದಿನಾಂಕದಿಂದ 12 ತಿಂಗಳುಗಳು ಪೂರ್ಣಗೊಂಡ ನಂತರ ತಯಾರಿಸಿದ ಅಥವಾ ಆಮದು ಮಾಡಿಕೊಳ್ಳುವ ಎಲ್ಲಾ ತಂಬಾಕು ಉತ್ಪನ್ನಗಳಿಗೆ ಈ ನಿಯಮಾವಳಿ ಅನ್ವಯಿಸುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ

'ಟೆಲಿಫೋನ್ ಕ್ವಿಟ್-ಲೈನ್ ಸಂಖ್ಯೆ 'QUIT TODAY CALL 1800-11-2356' ಸಹ ಆರೋಗ್ಯದ ಎಚ್ಚರಿಕೆಯ ಒಂದು ಭಾಗವಾಗಿದೆ. ಇದು ತಂಬಾಕು ಬಳಕೆದಾರರಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ ಮತ್ತು ನಡವಳಿಕೆಯ ಬದಲಾವಣೆಯನ್ನು ಉಂಟುಮಾಡಲು ಅವರಿಗೆ ಸಮಾಲೋಚನೆ ಸೇವೆಗಳಿಗೆ ಅವಕಾಶ ಒದಗಿಸುತ್ತದೆ . ಧೂಮ ಮತ್ತು ಧೂಮ ರಹಿತ ತಂಬಾಕು ಉತ್ಪನ್ನಗಳಿಗೆ ಸಾಮಾನ್ಯ ನಿರ್ದಿಷ್ಟ ಆರೋಗ್ಯ ಎಚ್ಚರಿಕೆ ಇರುತ್ತದೆ” ಎಂದು ಸಚಿವಾಲಯ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com