ಶಂಕಾಸ್ಪದ ಚೈನಾ ಹಡಗನ್ನು ಅಟ್ಟಾಡಿಸಿ ಓಡಿಸಿದ ಭಾರತೀಯ ನೌಕಾ ಪಡೆ!

ಮಹತ್ವದ ಬೆಳವಣಿಗೆಯೊಂದರಲ್ಲಿ ಪೋರ್ಟ್ ಬ್ಲೇರ್  ಬಳಿ ಸಮುದ್ರದಲ್ಲಿ  ಶಂಕಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಚೈನಾದ ಹಡಗೊಂದನ್ನು ಭಾರತೀಯ ಸೇನೆ ಓಡಿಸಿದೆ.
ಚೈನಾದ ಹಡಗು
ಚೈನಾದ ಹಡಗು

ನವ ದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪೋರ್ಟ್ ಬ್ಲೇರ್  ಬಳಿ ಸಮುದ್ರದಲ್ಲಿ  ಶಂಕಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಚೈನಾದ ಹಡಗೊಂದನ್ನು ಭಾರತೀಯ ನೌಕಾ ಪಡೆ  ಓಡಿಸಿದೆ.

ಚೈನಾದ ಸಂಶೋಧನಾ ಹಡಗು ಶಿ- ಯಾನ್ 1 ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದ ಸಮುದ್ರದಲ್ಲಿ ಸಂಶೋಧನಾ ಕಾರ್ಯದಲ್ಲಿ ತೊಡಗಿರುವುದನ್ನು ಕಡಲು ಕಣ್ಗಾವಲು ವಿಮಾನದಿಂದ ಪತ್ತೆ ಹಚ್ಚಲಾಯಿತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಜಲ ಗಡಿ ಭಾಗ ಹಾಗೂ  ಆಗ್ನೇಯ ಏಷ್ಯಾ ವಲಯದಲ್ಲಿ ಕಣ್ಗಾವಲು ಇಟ್ಟಿರುವಂತೆ ಈ ಭಾಗದಲ್ಲಿನ ಭಾರತದ  ಚಟುವಟಿಕೆಗಳ ಮೇಲೆ ಕಣ್ಣಿಡಲು ಈ ಹಡಗನ್ನು ಚೈನಾ ಬಳಸುತಿತ್ತು ಎಂಬುದು  ತಿಳಿದುಬಂದಿದೆ. 

ಕಡಲು ಕಣ್ಗಾವಲು ವಿಮಾನದಿಂದ ವಿಮಾನವನ್ನು ಪತ್ತೆ ಹಚ್ಚಿದ ನಂತರ ಭಾರತೀಯ ಎಕ್ಸ್ ಕ್ಲೂಸಿವ್  ಆರ್ಥಿಕ ವಲಯಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ತೊಡಗಿರುವುದು ಕಂಡುಬಂದಿದ್ದು, ನಂತರ ಅದನ್ನು ಭಾರತೀಯ ನೌಕಾ ಪಡೆಯಿಂದ ವಾಪಾಸ್ ಕಳುಹಿಸಲಾಗಿದೆ.

ಭಾರತೀಯ ಎಕ್ಸ್ ಕ್ಲೂಸಿವ್  ಆರ್ಥಿಕ ವಲಯದಲ್ಲಿ ಸಂಶೋಧನೆ ನಡೆಸಲು ವಿದೇಶಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಆದಾಗ್ಯೂ, ಈ  ಭಾಗದಲ್ಲಿ ಸಂಶೋಧನೆ ಏಕೆ ನಡೆಸಲಾಯಿತು ಎಂದು ಚೈನಾದ ಸಂಶೋಧನಾ ಹಡಗನ್ನು ಭಾರತೀಯ ನೌಕಾ ಪಡೆ ಪ್ರಶ್ನಿಸಿದೆ. ಭಾರತ ನೌಕಪಡೆಯ ಸೂಚನೆ ನಂತರ ಶಿ-ಯಾನ್ 1 ಹಡುಗು ಅಲ್ಲಿಂದ ವಾಪಾಸ್ ಆಗಿರುವುದಾಗಿ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com