ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಭೀಮಾ ಕೋರೆಗಾಂವ್ ಹಿಂಸಾಚಾರ: ಕೇಸ್ ಗಳು ವಾಪಾಸ್- ಉದ್ಧವ್ ಠಾಕ್ರೆ 

ಭೀಮಾ- ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ಮಹಾ ವಿಕಾಸ್ ಅಘಾಡಿ ಸರ್ಕಾರ  ವಾಪಾಸ್ ಪಡೆಯುವುದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

ಮುಂಬೈ: ಭೀಮಾ- ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ಮಹಾ ವಿಕಾಸ್ ಅಘಾಡಿ ಸರ್ಕಾರ  ವಾಪಾಸ್ ಪಡೆಯುವುದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

ಆದಾಗ್ಯೂ, ಮಾವೋವಾದಿಗಳ ಜೊತೆಗಿನ ನಂಟು ಆರೋಪದ ಮೇಲೆ ಬಂಧನಕ್ಕೊಳಗಾದ  ಹೋರಾಟಗಾರರ ಮೇಲಿನ ಕೇಸ್ ಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. 

ತಪ್ಪಿನಿಂದಾಗಿರುವ ಎಲ್ಲಾ ಕೇಸ್ ಗಳನ್ನು ವಾಪಾಸ್ ಪಡೆದುಕೊಳ್ಳಲಾಗುವುದು. ಗಂಭೀರ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರನ್ನು ಹೊರತುಪಡಿಸಿದಂತೆ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದ ಕೇಸ್ ಗಳನ್ನು ವಾಪಾಸ್ ಪಡೆಯುವ ಪ್ರಕ್ರಿಯೆಯನ್ನು ಹಿಂದಿನ ಸರ್ಕಾರ ಕೂಡಾ ಆರಂಭಿಸಿತ್ತು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಅವರು ತಿಳಿಸಿದ್ದಾರೆ. 

ನಾನರ್ ರೆಪಿನರಿ ಕೇಸಿಗೆ ಸಂಬಂಧಿಸಿದಂತೆ ಹೋರಾಟಗಾರ ಮೇಲಿನ ಕೇಸ್ ಗಳನ್ನು ಠಾಕ್ರೆ ಸರ್ಕಾರ ವಾಪಾಸ್ ಪಡೆದ ನಂತರ ಭೀಮಾ- ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕೆಂದು ಹಿರಿಯ ಎನ್ ಸಿಪಿ ನಾಯಕ ಪ್ರಕಾಶ್ ಗಜ್ಭಿಯೆ  ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದರು. 

ಕಳೆದ ವರ್ಷ ಜನವರಿ 1 ರಂದು ಭೀಮಾ ಕೋರೆಗಾಂವ್ ನಲ್ಲಿ ಸಂಬಂಧಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅನೇಕ ಯುವಕರು, ಮಹಿಳೆಯರು ಹಾಗೂ ದಲಿತ ಹೋರಾಟಗಾರ ಮೇಲೆ ಕೇಸ್ ಗಳನ್ನು ಹಾಕಲಾಗಿದ್ದು, ಇವೆಲ್ಲಾ ಕೇಸ್ ಗಳನ್ನು ಹಿಂಪಡೆದು ದಲಿತ ಸಮುದಾಯಕ್ಕೆ ನ್ಯಾಯ ದೊರಕಿಸಬೇಕೆಂದು ಗಜ್ಭಿಯೆ ಒತ್ತಾಯಿಸಿದ್ದರು 

Related Stories

No stories found.

Advertisement

X
Kannada Prabha
www.kannadaprabha.com