ಉನ್ನಾವೋ ಪ್ರಕರಣ: ಅಜ್ಜಿ ಸಮಾಧಿಯ ಪಕ್ಕ ಸಮಾಧಿಯಾದ ಸಂತ್ರಸ್ಥೆ, ಕುಟುಂಬದಿಂದ ಅಂತಿಮ ವಿಧಿವಿಧಾನ ಪೂರ್ಣ

44 ಗಂಟೆಗಳ ಸತತ ಸಾವು-ಬದುಕಿನ ನಡುವೆ ಹೋರಾಟದ ನಂತರ ನವದೆಹಲಿಯ ಸಫ್ದುರ್ಜಂಗ್ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ನಿಧಳಾದ ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ಮಹಿಳೆಯ ಕುಟುಂಬವು ಅವರ ಅಜ್ಜ-ಅಜ್ಜಿಯ ಸಮಾಧಿಯ ಆಕೆಯ ಸಮಾಧಿ ಮಾಡುವ ಮೂಲಕ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದೆ.ಉನ್ನಾವೋನ ಖೇರಾ ಗ್ರಾಮದ ಕೃಷಿಭೂಮಿಯಲ್ಲಿ ಈ ಅಂತಿಮ ಕ್ರಿಯಾ ವಿಧಾನಗಳು ನಡೆದಿದೆ..
ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ಶವಸಂಸ್ಕಾರಕ್ಕಾಗಿ ಸಿದ್ದತೆ
ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ಶವಸಂಸ್ಕಾರಕ್ಕಾಗಿ ಸಿದ್ದತೆ
Updated on

ಲಖನೌ: 44 ಗಂಟೆಗಳ ಸತತ ಸಾವು-ಬದುಕಿನ ನಡುವೆ ಹೋರಾಟದ ನಂತರ ನವದೆಹಲಿಯ ಸಫ್ದುರ್ಜಂಗ್ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ನಿಧಳಾದ ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ಮಹಿಳೆಯ ಕುಟುಂಬವು ಅವರ ಅಜ್ಜ-ಅಜ್ಜಿಯ ಸಮಾಧಿಯ ಆಕೆಯ ಸಮಾಧಿ ಮಾಡುವ ಮೂಲಕ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದೆ.ಉನ್ನಾವೋನ ಖೇರಾ ಗ್ರಾಮದ ಕೃಷಿಭೂಮಿಯಲ್ಲಿ ಈ ಅಂತಿಮ ಕ್ರಿಯಾ ವಿಧಾನಗಳು ನಡೆದಿದೆ..

ಒಂದು ವರ್ಷದ ಹಿಂದೆ 2018 ರ ಡಿಸೆಂಬರ್‌ನಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳಿಂದ ಗುರುವಾರ ಮುಂಜಾನೆ ಸಂತ್ರಸ್ತೆ ಬೆಂಕಿಗೆ ಆಹುತಿಯಾಗಿದ್ದಳು. ಶೇ. 90 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ಆಕೆಯನ್ನು ದೆಹಲಿಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಒದಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಕೆ ಮೃತಪಟಿದ್ದಾಳೆ.

ಇನ್ನು ಮೊದಲಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮನದವರೆಗೆ ಸಂತ್ರಸ್ಥೆಯ ಅಂತ್ಯಸಂಸ್ಕಾರ ನಡೆಸುವುದಿಲ್ಲ ಆಕೆಯ ಕುಟುಂಬ ಆಗ್ರಹಿಸ್ದೆ. ಆದರೆ ಸರ್ಕಾರಿ ವಿಭಾಗದ ಹಿರಿಯ ಅಧಿಕಾರಿಗಳ ಹೆಚ್ಚಿನ ಮನವೊಲಿಕೆ  ಮಾಡಿದ ಬಳಿಕ,  ಮಂತ್ರಿಗಳಾದ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಕಮಲ್ ರಾಣಿ ವರುಣ್ ಅವರ ಆಗಮನದ ನಂತರವೇ ಕುಟುಂಬವು ಅಂತಿಮ ವಿಧಿಗಳನ್ನು ಮಾಡಲು ಒಪ್ಪಿಕೊಂಡಿತು.

ಸಿಎಂ ಯೋಗಿ ಆದಿತ್ಯನಾಥ್ ಅವರ ಸೂಚನೆ ಮೇರೆಗೆ ಇಬ್ಬರೂ ಮಂತ್ರಿಗಳು ಯುವತಿಯ ಅಂತಿಮ ವಿಧಿ ವಿಧಾನ ನಡೆಯುವ ಮುನ್ನ ಅವರ ಮನೆಗೆ ತೆರಳಿ ನೆರವಿನ ಭರವಸೆ ನೀಡಿದ್ದಾರೆ.ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಕ್ಕೆ ಕೊಂಡೊಯ್ಯುವ ಮೂಲಕ ಶೀಘ್ರ ನ್ಯಾಯ ದೊರಕಿಸುವುದಾಗಿ ಭರವಸೆ ನೀಡಿದ ಉತ್ತರ ಪ್ರದೇಶ ಸರ್ಕಾರ ಈಗಾಗಲೇ 25 ಲಕ್ಷ ರೂ ಪರಿಹಾರವನ್ನು ಘೋಷಿಸಿದೆ. ಅಲ್ಲದೆ ಕುಟುಂಬಕ್ಕೆ ಪಕ್ಕಾಮನೆಯನ್ನೂ ಮಾಡಿಕೊಡುವುದಾಗಿ ಹೇಳಿದೆ.ಯಾವುದೇ ರೀತಿಯ ದಾಳಿಯಿಂದ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಲಾಗಿದೆ. ಕುಟುಂಬವು ಇಟ್ಟಿರುವ ಇತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ.

ತನ್ನ ಮಗಳ ಸಾವಿಗೆ ಕಾರಣವಾದ ಐವರನ್ನು ಹೈದರಾಬಾದ್ ಪ್ರಕರಣದಂತೆ "ಬೆನ್ನಟ್ಟಬೇಕು ಮತ್ತು ಗುಂಡಿಕ್ಕಿ ಕೊಲ್ಲಬೇಕು’ ಎಂದು ಸಂತ್ರಸ್ತೆಯ ತಂದೆ ಈ ಹಿಂದೆ ಒತ್ತಾಯಿಸಿದ್ದರು, 

ಉನ್ನಾವೋ ಅತ್ಯಾಚಾರ-ಕೊಲೆ ಸಂತ್ರಸ್ತೆಯ ಮರಣೋತ್ತರ ವರದಿಯು ವ್ಯಾಪಕ ಸುಟ್ಟ ಗಾಯಗಳಿಂದ ಸಾವನ್ನಪ್ಪಿದೆ ಎಂದು ಸೂಚಿಸಿದೆ. ಐವರು ಪುರುಷರು ಆಕೆಯನ್ನು ಗ್ರಾಮದ ಹೊರಗೆ ಎಳೆದೊಯ್ದು, ಅವಳ ಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟುಹಾಕಿದಾಗ ಸಂತ್ರಸ್ತೆ ಶೇಕಡಾ 90 ರಷ್ಟು ಸುಟ್ಟಗಾಯಗಳಿಗೆ ಒಳಗಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com