ಲಂಕಾ ತಮಿಳರಿಗೆ ಪೌರತ್ವ ಕೊಡಿ-ಕೇಂದ್ರಕ್ಕೆ ಶ್ರಿಶ್ರೀ ರವಿಶಂಕರ್ ಒತ್ತಾಯ

ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ನಿರಾಶ್ರಿತರಾಗಿ ವಾಸಿಸುತ್ತಿರುವ ಲಕ್ಷಕ್ಕೂ ಹೆಚ್ಚು ಶ್ರೀಲಂಕಾದ ತಮಿಳರಿಗೆ ಪೌರತ್ವ ನೀಡುವ ಬಗ್ಗೆ ಗಮನಹರಿಸಬೇಕಿದೆ ಎಂದು "ಜೀವನ ಕಲೆ" ಖ್ಯಾತಿಯ ಆದ್ಯಾತ್ಮಿಕ ಸಾಧಕ ಶ್ರೀಶ್ರೀ ರವಿಶಂಕರ್ ಕೇಂದ್ರವನ್ನು ಒತ್ತಾಯಿಸಿದ್ದಾರೆ. 
ಶ್ರೀಶ್ರೀ ರವಿಶಂಕರ್
ಶ್ರೀಶ್ರೀ ರವಿಶಂಕರ್
Updated on

ಬೆಂಗಳೂರು: ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ನಿರಾಶ್ರಿತರಾಗಿ ವಾಸಿಸುತ್ತಿರುವ ಲಕ್ಷಕ್ಕೂ ಹೆಚ್ಚು ಶ್ರೀಲಂಕಾದ ತಮಿಳರಿಗೆ ಪೌರತ್ವ ನೀಡುವ ಬಗ್ಗೆ ಗಮನಹರಿಸಬೇಕಿದೆ ಎಂದು "ಜೀವನ ಕಲೆ" ಖ್ಯಾತಿಯ ಆದ್ಯಾತ್ಮಿಕ ಸಾಧಕ ಶ್ರೀಶ್ರೀ ರವಿಶಂಕರ್ ಕೇಂದ್ರವನ್ನು ಒತ್ತಾಯಿಸಿದ್ದಾರೆ.

"ಕಳೆದ 35 ವರ್ಷಗಳಿಂದ ನಿರಾಶ್ರಿತರಾಗಿ ವಾಸಿಸುತ್ತಿರುವ ಒಂದು ಲಕ್ಷಕ್ಕೂ ಹೆಚ್ಚು ಶ್ರೀಲಂಕಾ ತಮಿಳರಿಗೆ  ಪೌರತ್ವ ನೀಡುವ ಸಂಬಂಧ ಗಮನಹರಿಸಿ ಎಂದು  ನಾನು ಭಾರತ ಸರ್ಕಾರವನ್ನು ವಿನಂತಿಸುತ್ತೇನೆ" ಶ್ರೀಶ್ರೀ ರವಿಶಂಕರ್ ಟ್ವೀಟ್ ನಲ್ಲಿ ಹೇಳಿದ್ದಾರೆ.

ಲೋಕಸಭೆಯು ಪೌರತ್ವ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ ಒಂದು ದಿನದ ನಂತರ ಕೇಂದ್ರಕ್ಕೆ ಶ್ರೀ ಶ್ರೀ ರವಿಶಂಕರ್ ಅವರ ಮನವಿ ಬಂದಿದೆ. 

ಪ್ರಸ್ತಾವಿತ ಶಾಸನದ ಪ್ರಕಾರ, 2014 ರ ಡಿಸೆಂಬರ್ 31 ರೊಳಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ  ಆಗಮಿಸಿರುವ ಮತ್ತು ಆ ದೇಶಗಳಲ್ಲಿ ಧಾರ್ಮಿಕ ಕಿರುಕುಳವನ್ನು ಎದುರಿಸಿದ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಸದಸ್ಯರನ್ನು ಭಾರತೀಯ ಪೌರತ್ವ ನೀಡಲು ಪರಿಗಣಿಸಲಾಗುವುದು. ಆದರೆ ಅಕ್ರಮ ವಲಸಿಗರನ್ನು ಹಾಗೆಂದು ಪರಿಗಣಿಸುವಂತಿಲ್ಲ.

ತಮಿಳುನಾಡಿನ ಅನೇಕ ಕಡೆಗಳಲ್ಲಿ ಸರ್ಕಾರಿ ಶಿಬಿರಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಗಮನಾರ್ಹ ಸಂಖ್ಯೆಯ ಶ್ರೀಲಂಕಾದ ತಮಿಳರು ನೆಲೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com