ಆರ್ಥಿಕ ಕುಸಿತಕ್ಕೆ ನೆಹರೂ, ಇಂದಿರಾರನ್ನು ದೂಷಿಸಬೇಡಿ: ಕೇಂದ್ರದ ವಿರುದ್ಧ ಶಿವಸೇನೆ ವಾಗ್ದಾಳಿ

ಪ್ರಧಾನಮಂತ್ರಿ ಕಚೇರಿಯಅಧಿಕಾರದ ಕೇಂದ್ರೀಕರಣವು ದೇಶದ "ಕಳಪೆ" ಆರ್ಥಿಕ ಸ್ಥಿತಿಗೆ ಒಂದು ಪ್ರಮುಖ ಕಾರಣ ಎಂದು ಶಿವಸೇನೆ ಹೇಳಿಕೆಯಲ್ಲಿ ತಿಳಿಸಿದೆ.ಕೇಂದ್ರ ಸರ್ಕಾರವು ಹಣಕಾಸು ಮಂತ್ರಿ ಮತ್ತು ಆರ್‌ಬಿಐ ಗವರ್ನರ್‌ನನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಬಯಸಿದೆ ಎಂದು ಸೇನಾ ಮುಖವಾಣಿ "ಸಾಮ್ನಾ" ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ಆರ್ಥಿಕ ಕುಸಿತಕ್ಕೆ ನೆಹರೂ, ಇಂದಿರಾರನ್ನು ದೂಷಿಸಬೇಡಿ: ಕೇಂದ್ರದ ವಿರುದ್ಧ ಶಿವಸೇನೆ ವಾಗ್ದಾಳಿ
Updated on

ಮುಂಬೈ: ಪ್ರಧಾನಮಂತ್ರಿ ಕಚೇರಿಯಅಧಿಕಾರದ ಕೇಂದ್ರೀಕರಣವು ದೇಶದ "ಕಳಪೆ" ಆರ್ಥಿಕ ಸ್ಥಿತಿಗೆ ಒಂದು ಪ್ರಮುಖ ಕಾರಣ ಎಂದು ಶಿವಸೇನೆ ಹೇಳಿಕೆಯಲ್ಲಿ ತಿಳಿಸಿದೆ.ಕೇಂದ್ರ ಸರ್ಕಾರವು ಹಣಕಾಸು ಮಂತ್ರಿ ಮತ್ತು ಆರ್‌ಬಿಐ ಗವರ್ನರ್‌ನನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಬಯಸಿದೆ ಎಂದು ಸೇನಾ ಮುಖವಾಣಿ "ಸಾಮ್ನಾ" ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಬಿಜೆಪಿ ನೇತೃತ್ವದ ಆಡಳಿತವು ಆರ್ಥಿಕತೆಯನ್ನು "ಷೇರು ಮಾರುಕಟ್ಟೆ ಜೂಜು" ಎಂದು ಪರಿಗಣಿಸುವುದರಿಂದ ಅರ್ಥಶಾಸ್ತ್ರಜ್ಞರ ಮಾತುಗಳನ್ನು ಕೇಳಲು ಸಿದ್ಧವಾಗಿಲ್ಲ ಎಂದು ಶಿವಸೇನೆ ಆರೋಪಿಸಿದೆ.

ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್  ಇತ್ತೀಚೆಗೆ ಭಾರತವು "ಆರ್ಥಿಕ ಹಿಂಜರಿತ" ದಲ್ಲಿದೆ ಎಂದು ಹೇಳಿದ್ದರು.ಆರ್ಥಿಕತೆಯಲ್ಲಿ ಆಳವಾದ ಅಸ್ಥಿರತೆ ಚಿಹ್ನೆಗಳೊಂದಿಗೆ ಪಿಎಂಒ ಮತ್ತು ಅಧಿಕಾರದಲ್ಲಿರುವ ಮಂತ್ರಿಗಳಲ್ಲಿ ಅಧಿಕಾರದ ಕೇಂದ್ರೀಕರಣವಾಗುತ್ತಿದೆ. ಭಾರತದ ಆರ್ಥಿಕ ಬೆಳವಣಿಗೆಯು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆರು ವರ್ಷಗಳ ಕನಿಷ್ಠ ಶೇಕಡಾ 4.5 ಕ್ಕೆ ಇಳಿದಿದೆ. ಎಂದು ಆತಂಕ ವ್ಯಕ್ತಪಡಿಸಿದ್ದರು.

ಹೆಚ್ಚುತ್ತಿರುವ ಹಣದುಬ್ಬರದೊಂದಿಗೆ ಒಟ್ಟಾರೆ ಬೇಡಿಕೆಯ ಕುಸಿತ ಕಂಡುಬರುತ್ತಿದ್ದು ಇದಕ್ಕಾಗಿ ದೇಶದ  ಮಾಜಿ ಪ್ರಧಾನ ಮಂತ್ರಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಶಿವಸೇನೆ ತಿಳಿಸಿದೆ. "ಪಿಎಂಒ ಮತ್ತು ಶಕ್ತಿಹೀನ ಮಂತ್ರಿಗಳಲ್ಲಿ ಅಧಿಕಾರ ಕೇಂದ್ರೀಕರಣ ರ್ಥಿಕತೆಗೆ ಒಳ್ಳೆಯದಲ್ಲ" ಎಂದು ಮರಾಠಿ ಪ್ರಕಟಣೆ ತಿಳಿಸಿದೆ. "ಪ್ರಸ್ತುತ ಸರ್ಕಾರವು ಅರ್ಥಶಾಸ್ತ್ರಜ್ಞರ ಮಾತನ್ನು ಕೇಳಲು ಸಿದ್ದವಾಗಿಲ್ಲ., ಏಕೆಂದರೆ ಇದು ಆರ್ಥಿಕತೆಯನ್ನು 'ಷೇರು ಮಾರುಕಟ್ಟೆಯ ಜೂಜಾಟ” ಎಂದು ಪರಿಗಣಿಸುತ್ತದೆ. ಹಣಕಾಸು ಸಚಿವರಾಗಿ ನಿರ್ಮಲಾ ಸೀತಾರಾಮನ್ ಅವರ ಕೊಡುಗೆ ಏನು - 'ನಾನು ಈರುಳ್ಳಿ ತಿನ್ನುವುದಿಲ್ಲ, ನೀವೂ ಸಹ ಹಾಗೆ ಮಾಡಿ'," ಎಂದು ಉಪದೇಶಿಸುವುದೇ?"ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ ಟೀಕಿಸಿದೆ.

ಹಣಕಾಸು ಸಚಿವರು, ಆರ್‌ ಬಿಐ  ಗವರ್ನರ್, ಹಣಕಾಸು ಕಾರ್ಯದರ್ಶಿ ಮತ್ತು ನಿತಿ ಅಯೋಗ ಅಧ್ಯಕ್ಷರು ತಮ್ಮ ನಿಯಂತ್ರಣದಲ್ಲಿರಬೇಕು ಎಂದು ಸರ್ಕಾರ ಬಯಸಿದೆ, ಇದು ದೇಶದ "ಕಳಪೆ" ಆರ್ಥಿಕ ಪರಿಸ್ಥಿತಿಗೆ ಮುಖ್ಯ ಕಾರಣವಾಗಿದೆ ಎಂದು ಅದು ಹೇಳಿದೆ. ಆರ್ಥಿಕತೆಯು "ಪಾರ್ಶ್ವವಾಯುವಿಗೆ ಒಳಗಾಗಿದೆ" ಮತ್ತು ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರ "ರೋಗನಿರ್ಣಯ" ಸಂಪೂರ್ಣವಾಗಿ ಸರಿಯಾಗಿದೆ ಎಂದು "ಸಾಮ್ನಾ" ಸಂಪಾದಕೀಯದಲ್ಲಿ ಹೇಳಿದೆ.

"ಆರ್ಥಿಕ ಕುಸಿತವನ್ನು ಒಪ್ಪಿಕೊಳ್ಳಲು ಸರ್ಕಾರ ಸಿದ್ಧವಾಗಿಲ್ಲ. ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 200 ರೂ. ಮುಟ್ಟಿದಾಗ, ಹಣಕಾಸು ಸಚಿವರು 'ನಾನು ಬೆಳ್ಳುಳ್ಳಿ, ಈರುಳ್ಳಿ ತಿನ್ನುವುದಿಲ್ಲ, ಆದ್ದರಿಂದ ನನ್ನನ್ನು ಕೇಳಬೇಡಿ' ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುತ್ತಿಲ್ಲ ಎಂದು ಆರೋಪಿಸಿರುವ ಶಿವಸೇನೆ "ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಹೆಚ್ಚುತ್ತಿರುವ ಈರುಳ್ಳಿ ಬೆಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು" ಎಂದು ನೆನಪಿಸಿದೆ. . ಮೋದಿಯವರು ಗುಜರಾತ್ ಸಿಎಂ ಆಗಿದ್ದಾಗ, ಈರುಳ್ಳಿ ಅತ್ಯಗತ್ಯ ಸರಕು ಎಂದು ಹೇಳಿದ್ದರು ಮತ್ತು ಅದು ತುಂಬಾ ದುಬಾರಿಯಾಗಿದೆ, ಅದನ್ನು "ಲಾಕರ್‌ಗಳಲ್ಲಿ ಇಡಬೇಕು" ಎಂದು ಶಿವಸೇನೆ ವ್ಯಂಗ್ಯವಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com