'ಭಾರತದ ಸಂವಿಧಾನದ ಇತಿಹಾಸದಲ್ಲೇ ಇದು ಕರಾಳ ದಿನ'
'ಭಾರತದ ಸಂವಿಧಾನದ ಇತಿಹಾಸದಲ್ಲೇ ಇದು ಕರಾಳ ದಿನ'

'ಭಾರತದ ಸಂವಿಧಾನದ ಇತಿಹಾಸದಲ್ಲೇ ಇದು ಕರಾಳ ದಿನ'

ಪೌರತ್ವ ತಿದ್ದುಪಡಿ ಮಸೂದೆ-2019 ಸಂಸತ್ ನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವುದು ಭಾರತದ ಸಂವಿಧಾನದ ಇತಿಹಾಸದಲ್ಲೇ ಕರಾಳ ದಿನ ಎಂದು ವ್ಯಾಖ್ಯಾನಿಸಲಾಗುತ್ತಿದೆ. 

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ-2019 ಸಂಸತ್ ನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವುದು ಭಾರತದ ಸಂವಿಧಾನದ ಇತಿಹಾಸದಲ್ಲೇ ಕರಾಳ ದಿನ ಎಂದು ವ್ಯಾಖ್ಯಾನಿಸಲಾಗುತ್ತಿದೆ. 

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪೌರತ್ವ ತಿದ್ದುಪಡಿ ಮಸೂದೆ ಸಂಬಂಧ ಬರೆದಿರುವ ಪತ್ರದಲ್ಲಿ ಈ ರೀತಿ ವ್ಯಾಖ್ಯಾನಿಸಿದ್ದಾರೆ. 

ಮಸೂದೆ ಅಂಗೀಕಾರಗೊಂಡಿರುವುದು ಭಾರತದ ಬಹುತ್ವದ ವಿರುದ್ಧ ಸಂಕುಚಿತ ಮನಸ್ಥಿತಿಯ, ಧರ್ಮಾಂಧತೆಯ ಗೆಲುವಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. 

ವಿಶ್ವವೇ ಮಹಾತ್ಮಾ ಗಾಂಧಿ ಅವರ 150 ನೇ ಜನ್ಮದಿನವನ್ನು ಆಚರಿಸುತ್ತಿದೆ. ಈಸಂದರ್ಭದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ ಆಗಿರುವುದು ವಿಪರ್ಯಾಸ. ಭಾರತ ಎಲ್ಲಾ ಜನರಿಗೂ ಮುಕ್ತವಾಗಿರುವ ದೇಶ ಎಂಬುದನ್ನು ಸ್ಪಷ್ಟವಾಗಿ ನಿರಾಕರಿಸುವ ಮಸೂದೆ ಇದಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com