ತಿರುಪತಿ ದೇವಾಲಯದ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ: ದರ್ಶನದ ಸಮಯ ವ್ಯತ್ಯಯ!
ದೇಶ
ತಿರುಪತಿ ದೇವಾಲಯದ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ: ದರ್ಶನದ ಸಮಯ ವ್ಯತ್ಯಯ!
ತಿರುಪತಿ ದೇವಾಲಯ ಇರುವ ಆವರಣ ಪ್ರದೇಶದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಿರುಪತಿ: ತಿರುಪತಿ ದೇವಾಲಯ ಇರುವ ಆವರಣ ಪ್ರದೇಶದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೇವಾಲಯದ ಆವರಣದಲ್ಲಿ ಚಲಿಸುತ್ತಿದ್ದ ಹಾಲಿನ ವ್ಯಾನ್ ನ ಹಿಂಬದಿಯ ಚಕ್ರಕ್ಕೆ ಸಿಲುಕಿ 50-55 ವರ್ಷದ ವ್ಯಕ್ತಿ ಜೀವ ಕಳೆದುಕೊಂಡಿದ್ದಾನೆ. ಆರಂಭದಲ್ಲಿ ಇದನ್ನು ಅಪಘಾತವೆಂದೇ ಭಾವಿಸಲಾಗಿತ್ತು. ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇದು ಆತ್ಮಹತ್ಯೆ ಎಂಬುದು ತಿಳಿದುಬಂದಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಈ ವ್ಯಕ್ತಿಯ ಗುರುತನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿವೆ.
ದೇವಾಲಯದ ಬಳಿ ಈ ಆತ್ಮಹತ್ಯೆ ಮಾಡಿಕೊಂಡ ಬಳಿಕ ಶ್ರೀವಾರಿ ದರ್ಶನವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ನಂತರ ಧಾರ್ಮಿಕ ಕ್ರಿಯೆಗಳು ನಡೆದ ಬಳಿಕ ದರ್ಶನ ಪುನಾರಂಭ ಮಾಡಲಾಯಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ