
ನವದೆಹಲಿ: ಲಿಂಗ ಅಸಮಾನತೆ ಸಾಧಿಸುವಲ್ಲಿ ಭಾರತದ ಕಳಪೆ ಪ್ರದರ್ಶನ ಮುಂದುವರೆದಿದ್ದು, ಈ ವರ್ಷ ಮತ್ತೆ ನಾಲ್ಕು ಸ್ಥಾನ ಕುಸಿಯುವ ಮೂಲಕ 112ನೇ ಸ್ಥಾನ ಪಡೆದಿದೆ.
ವಿಶ್ವ ಆರ್ಥಿಕ ವೇದಿಕೆ(ಡಬ್ಲ್ಯುಇಎಫ್) ಮಂಗಳವಾರ ಪ್ರಕಟಿಸಿರುವ ಜಾಗತಿಕ ಲಿಂಗ ಅಸಮಾನತೆ (ಗ್ಲೋಬಲ್ ಜೆಂಡರ್ ) ಸೂಚ್ಯಂಕದಲ್ಲಿ ಭಾರತ ಈ ವರ್ಷ ಮತ್ತೆ ನಾಲ್ಕು ಸ್ಥಾನ ಕುಸಿದಿದೆ. ಕಳೆದ ವರ್ಷ 21 ಸ್ಥಾನ ಕುಸಿಯುವ ಮೂಲಕ 108ನೇ ಸ್ಥಾನ ಪಡೆದಿತ್ತು.
ನೆರೆಯ ರಾಷ್ಟ್ರಗಳಾದ ಚೀನಾ(106ನೇ ಸ್ಥಾನ), ಶ್ರೀಲಂಕಾ(102) ನೇಪಾಳ(101), ಬ್ರೇಜಿಲ್(92), ಇಂಡೋನೆಷಿಯಾ(85) ಹಾಗೂ ಬಾಂಗ್ಲಾದೇಶ(50) ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿವೆ.
ಲಿಂಗ ಸಮಾನತೆ ಸೂಚ್ಯಂಕದಲ್ಲಿ ಯೇಮನ್ ಅತ್ಯಂತ ಕಡೆ(153) ಸ್ಥಾನ ಪಡೆದಿದ್ದು, ಇರಾಕ್ 152ನೇ ಸ್ಥಾನ, ಪಾಕಿಸ್ತಾನ 151ನೇ ಸ್ಥಾನ ಪಡೆದಿದೆ.
ಇನ್ನು ಮಹಿಳೆಯರ ಆರೋಗ್ಯ ಹಾಗೂ ಅರ್ಥಿಕತೆಯಲ್ಲೂ ಭಾರತ ಕಳಪೆ ಪ್ರದರ್ಶನ ತೊರಿದ್ದು, ಆರ್ಥಿಕತೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಡಿಮೆಯಾಗಿದೆ ಮತ್ತು ಅವರಿಗೆ ಕಡಿಮೆ ಸಂಬಳ ನೀಡುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಡಬ್ಲ್ಯುಇಎಫ್ ವಿಶ್ಲೇಷಿಸಿದೆ.
ಡಬ್ಲ್ಯುಇಎಫ್ ಆರೋಗ್ಯ, ಮಹಿಳೆಯರ ಆರ್ಥಿಕ ಪ್ರಾಬಲ್ಯ, ದೊರಕುತ್ತಿರುವ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ದೊರಕುತ್ತಿರುವ ಅವಕಾಶವನ್ನು ಗಮನದಲ್ಲಿರಿಸಿಕೊಂಡು ಸಮೀಕ್ಷೆ ನಡೆಸಿತ್ತು. ನಾಲ್ಕೂ ವಿಭಾಗದಲ್ಲಿ ಭಾರತದ ಮಹಿಳೆಯರು ಅವಕಾಶ ವಂಚಿತರಾಗಿದ್ದಾರೆಂದು ಅಭಿಪ್ರಾಯ ಪಟ್ಟಿದೆ.
Advertisement