ಉನ್ನಾವೋ ಅತ್ಯಾಚಾರ ಪ್ರಕರಣ: ಸೆಂಗಾರ್ ಶಾಸಕತ್ವ ಅನರ್ಹಗೊಳಿಸಲು ಸಿದ್ಧತೆ

ಉನ್ನಾವೋ ಯುವತಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ಉಚ್ಛಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ಅವರನ್ನು ಶಾಸಕತ್ವದಿಂದ ಅನರ್ಹಗೊಳಿಸಲು ಸಿದ್ಧತೆ ನಡೆದಿದೆ.
ಕುಲದೀಪ್ ಸಿಂಗ್ ಸೆಂಗರ್
ಕುಲದೀಪ್ ಸಿಂಗ್ ಸೆಂಗರ್
Updated on

ಲಖನೌ: ಉನ್ನಾವೋ ಯುವತಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ಉಚ್ಛಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ಅವರನ್ನು ಶಾಸಕತ್ವದಿಂದ ಅನರ್ಹಗೊಳಿಸಲು ಸಿದ್ಧತೆ ನಡೆದಿದೆ.

ಕಾನೂನು ತಜ್ಞರ ಪ್ರಕಾರ, ಕುಲದೀಪ್ ಸೆಂಗಾರ್ ಅವರನ್ನು ಕೋರ್ಟ್ ದೋಷಿ ಎಂದು ಘೋಷಿಸಿದ ದಿನದಿಂದಲೇ ಅವರ ವಿಧಾನಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು. ರಾಜ್ಯದ ರಾಜ್ಯಪಾಲರು ಸಂವಿಧಾನಾತ್ಮಕವಾಗಿ ಸೆಂಗಾರ್ ಅವರ ಶಾಸಕತ್ವನ್ನು ಅನರ್ಹಗೊಳಿಸಬೇಕು ಮತ್ತು ಈ ಕುರಿತು ಚುನಾವಣಾ ಆಯೋಗಕ್ಕೆ ವರದಿ ನೀಡಬೇಕಾಗುತ್ತದೆ ಎಂದು ಹಿರಿಯ ಕಾನೂನು ತಜ್ಞ ಸಿಪಿ ಪಾಂಡೆ ಅವರು ಹೇಳಿದ್ದಾರೆ.

ಸೆಂಗಾರ್ ಅವರನ್ನು ಶಾಸಕತ್ವದಿಂದ ಅನರ್ಹಗೊಳಿಸಿದರೆ, ಬಿಜೆಪಿಯಿಂದ ಅನರ್ಹಗೊಂಡ ಎರಡನೇ ಶಾಸಕ ಎಂಬ ಕುಖ್ಯಾತಿ ಪಡೆಯಲಿದ್ದಾರೆ. ಈ ಹಿಂದೆ ಕೊಲೆ ಪ್ರಕರಣದಲ್ಲಿ ಜೈಲು ಪಾಲಾದ ಹಮಿರ್ ಪುರ್ ಬಿಜೆಪಿ ಶಾಸಕ ಅಶೋಕ್ ಚಾಂಡಿಲ್ ಅವರನ್ನು ಅನರ್ಹಗೊಳಿಸಲಾಗಿತ್ತು.

ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಸೆಂಗಾರ್ ತಪ್ಪಿತಸ್ಥ ಎಂದು ಸೋಮವಾರ ದೆಹಲಿ ಕೋರ್ಟ್​ತೀರ್ಪು ನೀಡಿದ್ದು, ಡಿಸೆಂಬರ್​ 19ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com