ಮತದಾರರು
ಮತದಾರರು

ಜಾರ್ಖಂಡ್: ಅಂತಿಮ ಹಂತದ ಮತದಾನ ಮುಕ್ತಾಯ, ಶೇ 62.77ರಷ್ಟು ಮತದಾನ, ಡಿ. 23ಕ್ಕೆ ಫಲಿತಾಂಶ

ಜಾರ್ಖಂಡ್ ವಿಧಾನಸಭೆಯ ಐದನೇ ಹಾಗೂ ಅಂತಿಮ ಹಂತದ ಚುನಾವಣೆಯಲ್ಲಿ ಶುಕ್ರವಾರ16 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಮಧ್ಯಾಹ್ನ 3ಗಂಟೆಗೆ ಮತದಾನ ಕೊನೆಗೊಂಡ 5 ಕ್ಷೇತ್ರಗಳಲ್ಲಿ  ಸರಾಸರಿ ಶೇ 62.77ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.  

ಜಾರ್ಖಂಡ್: ಜಾರ್ಖಂಡ್ ವಿಧಾನಸಭೆಯ ಐದನೇ ಹಾಗೂ ಅಂತಿಮ ಹಂತದ ಚುನಾವಣೆಯಲ್ಲಿ ಶುಕ್ರವಾರ16 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಮಧ್ಯಾಹ್ನ 3ಗಂಟೆಗೆ ಮತದಾನ ಕೊನೆಗೊಂಡ 5 ಕ್ಷೇತ್ರಗಳಲ್ಲಿ  ಸರಾಸರಿ ಶೇ 62.77ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.  

ಉಳಿದ 11 ಕ್ಷೇತ್ರಗಳಲ್ಲಿ ಮತದಾನ ಸಂಜೆ 5 ಗಂಟೆಯವರೆಗೆ ನಡೆದಿದ್ದು, ಶೇ.60ಕ್ಕೂ ಹೆಚ್ಚು ಮತದಾನವಾಗಿದೆ.

ನಕ್ಸಲ್ ಪೀಡಿತ ಬೊರಿಯೊ, ಬರ್ಹೆಟ್, ಲಿಟ್ಟಿಪಾದ, ಮಹೇಶ್‍ಪುರ ಮತ್ತು ಶಿಕಾರಿಪಾದ ಕ್ಷೇತ್ರಗಳಲ್ಲಿ ಮಧ್ಯಾಹ್ನ 3ಗಂಟೆಗೆ ಮತದಾನ ಕೊನೆಗೊಂಡಿದೆ. 

ಮಹೇಶ್‍ಪುರದಲ್ಲಿ ಗರಿಷ್ಠ 70.4ರಷ್ಟು ಮತದಾನವಾಗಿದ್ದು, ಡುಮ್ಕಾದಲ್ಲಿ ಕನಿಷ್ಠ 55.26ರಷ್ಟು ಮತದಾನವಾಗಿದೆ. 

ಕ್ಷೇತ್ರವಾರು ಶೇಖಡವಾರು ಮತದಾನ
ರಾಜ್‍ಮಹಲ್ ಶೇ59.32, ಬೊರಿಯೊ (ಎಸ್‍ಟಿ) ಶೇ62.56, ಬರ್ಹೇತ್ (ಎಸ್‍ಟಿ) ಶೇ 63.78, ಲಿಟ್ಟಿಪಾದ(ಎಸ್‍ಟಿ) ಶೇ 66.95, ಪಕೂರ್ ಶೇ 69.96, ಮಹೇಶ್‍ಪುರ್(ಎಸ್‍ಟಿ) ಶೇ 70.44, ಶಿಕಾರಿಪಾದ (ಎಸ್‍ಟಿ) ಶೇ61.53, ನಳಾ ಶೇ68.21, ಜಮ್‍ತಾರ ಶೇ 66.11, ಡುಮ್ಕಾ (ಎಸ್‍ಟಿ) ಶೇ 55.26, ಜಮಾ(ಎಸ್‍ಟಿ) ಶೇ 62.20, ಜರ್ಮುಂಡಿ ಶೇ 63.56, ಸರತ್ ಶೇ 66.77, ಪೊರಿಯಾಹತ್ ಶೇ 55.68, ಗೊದ್ದ ಶೇ 58.12 ಹಾಗೂ ಮಹ್‍ಗಾಮದಲ್ಲಿ ಶೇ 56.77ರಷ್ಟು ಮತದಾನವಾಗಿದೆ.

ಜಾರ್ಖಂಡ್ ವಿಧಾನಸಭೆಗೆ ಒಟ್ಟು ಐದು ಹಂತಗಳಲ್ಲಿ ಚುನಾವಣೆ ನಡೆದಿದ್ದು, ಡಿಸೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.

Related Stories

No stories found.

Advertisement

X
Kannada Prabha
www.kannadaprabha.com