'ರಾಹುಲ್ ಮತ್ತು ಪ್ರಿಯಾಂಕಾ  ಜೀವಂತ ಪೆಟ್ರೋಲ್​ ಬಾಂಬ್​ಗಳು, ಹೋದಲ್ಲೆಲ್ಲ ಬೆಂಕಿ ಹೊತ್ತಿಸುತ್ತಾರೆ'

ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್​ ಗಾಂಧಿ ವಿರುದ್ಧ ಹರಿಯಾಣ ಸಚಿವ ಮತ್ತು ಬಿಜೆಪಿ ನಾಯಕ ಅನಿಲ್​ ವಿಜ್​ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಮತ್ತು ಪ್ರಿಯಾಂಕಾ ವಾದ್ರಾ
ರಾಹುಲ್ ಮತ್ತು ಪ್ರಿಯಾಂಕಾ ವಾದ್ರಾ
Updated on

ಹರ್ಯಾಣ: ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್​ ಗಾಂಧಿ ವಿರುದ್ಧ ಹರಿಯಾಣ ಸಚಿವ ಮತ್ತು ಬಿಜೆಪಿ ನಾಯಕ ಅನಿಲ್​ ವಿಜ್​ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ನಿನ್ನೆ ಉತ್ತರ ಪ್ರದೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ಮೇರಠ್​ಗೆ ತೆರಳಿದ್ದರು. ಆದರೆ ಅವರನ್ನು ಪೊಲೀಸರು ಮುಂದಡಿ ಇಡಲು ಬಿಟ್ಟಿರಲಿಲ್ಲ.

ಅದಾದ ಕೆಲವೇ ಹೊತ್ತಲ್ಲಿ ಹರಿಯಾಣ ಸಚಿವ ಅನಿಲ್​ ವಿಜ್​ ಅವರು ಟ್ವೀಟ್​ ಮಾಡಿ ಇವರಿಬ್ಬರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಬಗ್ಗೆ ಎಚ್ಚರಿಕೆ ಇರಲಿ. ಅವರಿಬ್ಬರೂ ಜೀವಂತ ಪೆಟ್ರೋಲ್​ ಬಾಂಬ್​ಗಳು. ಹೋದಲ್ಲೆಲ್ಲ ಬೆಂಕಿ ಹೊತ್ತಿಸುತ್ತಾರೆ. ಸಾರ್ವಜನಿಕ ಆಸ್ತಿಪಾಸ್ತಿಗಳ ನಾಶಕ್ಕೆ ಕಾರಣವಾಗುತ್ತಾರೆ ಎಂದು ಅನಿಲ್​ ವಿಜ್​ ಅವರು ಟ್ವೀಟ್ ಮಾಡಿದ್ದಾರೆ.

ಹರಿಯಾಣ ಸಚಿವ ಅನಿಲ್​ ವಿಜ್​ ಅವರು ವಿವಾದಾತ್ಮಕ ಹೇಳಿಕೆಗಳಿಂದಲೇ ಖ್ಯಾತರಾದವರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com