ವಿವಾದಾತ್ಮಕ ಎನ್ ಆರ್ ಸಿಯೊಂದಿಗೆ ಎನ್ ಪಿ ಆರ್ ಸ್ಪಷ್ಟ ಸಂಬಂಧ ಬಹಿರಂಗ

ಎನ್ ಆರ್ ಸಿಗೂ  ಎನ್ ಪಿಆರ್ ಗೂ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ ಆದರೆ, ಈ ವರ್ಷ ನಡೆದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿಆರ್ ) ಪೂರ್ವಭಾವಿ ಪರೀಕ್ಷೆಯು  ವಿವಾದಾತ್ಮಕ ಎನ್ ಆರ್ ಸಿ ಜೊತೆಗಿನ  ಸ್ಪಷ್ಟ ಸಂಬಂಧವನ್ನು ಬಹಿರಂಗಪಡಿಸುತ್ತದೆ. 
ಎನ್ ಆರ್ ಸಿ ವಿರೋಧಿಸಿ ನಡೆದ ಪ್ರತಿಭಟನೆ
ಎನ್ ಆರ್ ಸಿ ವಿರೋಧಿಸಿ ನಡೆದ ಪ್ರತಿಭಟನೆ

ನವದೆಹಲಿ: ಎನ್ ಆರ್ ಸಿಗೂ  ಎನ್ ಪಿಆರ್ ಗೂ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ ಆದರೆ, ಈ ವರ್ಷ ನಡೆದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿಆರ್ ) ಪೂರ್ವಭಾವಿ ಪರೀಕ್ಷೆಯು  ವಿವಾದಾತ್ಮಕ ಎನ್ ಆರ್ ಸಿ ಜೊತೆಗಿನ  ಸ್ಪಷ್ಟ ಸಂಬಂಧವನ್ನು ಬಹಿರಂಗಪಡಿಸುತ್ತದೆ. 

ಈ ವರ್ಷದ ಆರಂಭದಲ್ಲಿ ನಡೆಸಿದ ಎನ್ ಪಿಆರ್  ಪೂರ್ವಭಾವಿ ಪರೀಕ್ಷೆ ಸಂದರ್ಭದಲ್ಲಿ ಪೋಷಕರ ಜನ್ಮ ಸ್ಥಳಗಳನ್ನು ಕೋರಲಾಗಿತ್ತು. ಇದು ವಿವಾದಾತ್ಮಕ ರಾಷ್ಟ್ರೀಯ ನೋಂದಣಿ (ಎನ್ ಆರ್ ಸಿ) ಜೊತೆಗಿನ ಸ್ಪಷ್ಟ ಸಂಬಂಧಕ್ಕೆ ಸಾಕ್ಷಿಯಂತಿದೆ. 

ಡಿ.24 ರಂದು ನಡೆದ  ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎನ್ ಪಿಆರ್  ಪರಿಷ್ಕರಣೆಗಾಗಿ 3,941.35 ಕೋಟಿ ರೂಪಾಯಿ ಮೀಸಲಿಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿತ್ತು.

2010ರಲ್ಲಿ ಯುಪಿಎ ಸರ್ಕಾರದಲ್ಲಿ ನಡೆದ ಎನ್ ಪಿಆರ್ ಗೂ ಇದಕ್ಕೂ ಯಾವುದೇ ವ್ಯತ್ಯಾಸವಿಲ್ಲ ಆದರೆ, ಪೂರ್ವಭಾವಿ ಪರೀಕ್ಷೆಯಲ್ಲಿ ಅವುಗಳನ್ನು ತೆಗೆಯುವುದಿಲ್ಲ  ಎಂದು  ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆ ನೀಡಿದ್ದರು. ಆದರೆ, ಎನ್ ಪಿಆರ್ ಪೂರ್ವಭಾವಿ ಪರೀಕ್ಷೆ ಸಂದರ್ಭ ಪೋಷಕರ ಜನ್ಮ ಸ್ಥಳ ಮಾತ್ರವಲ್ಲದೇ, ಇತರೆ ವಿವಾದಾತ್ಮಾಕ  ಅಂಶಗಳಾದ  ಕೊನೆಯ ವಾಸ ಸ್ಥಳ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ , ಮತದಾನ ಗುರುತಿನ ಚೀಟಿ ಮತ್ತು ಮೊಬೈಲ್ ನಂಬರ್ ಕೇಳಲಾಗಿತ್ತು.

ಪೌರತ್ವ ನಿಯಮದ ಪ್ರಕಾರ ಎನ್‌ಪಿಆರ್ ಕಡ್ಡಾಯವಾಗಿದೆ ಮತ್ತು ಎನ್‌ಪಿಆರ್‌ನಲ್ಲಿ ಯಾವುದೇ ಸುಳ್ಳು ಮಾಹಿತಿಯನ್ನು ಒದಗಿಸುವುದರೆ  ದಂಡ ವಿಧಿಸಲಾಗುತ್ತದೆ ಅದನ್ನು  ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾಗಿದೆ. 

2010ರಲ್ಲಿ ನಡೆಸಿದ ಎನ್ ಪಿಆರ್  ಸಮೀಕ್ಷೆ ಸಂದರ್ಭ ಹೆಸರು, ಕುಟುಂಬದ ಮುಖ್ಯಸ್ಥರೊಂದಿಗೆ ಸಂಬಂಧ, ತಂದೆ ಹೆಸರು, 
ತಾಯಿ ಹೆಸರು, ಪೋಷಕರ ಹೆಸರು, ಲಿಂಗ, ಜನ್ಮ ದಿನಾಂಕ, ವೈವಾಹಿಕ ಮಾಹಿತಿ, ಜನ್ಮ ಸ್ಥಳ, ರಾಷ್ಟ್ರೀಯತೆ, ಪ್ರುಸ್ತುತ ವಿಳಾಸ, ಪ್ರಸ್ತುತ ವಿಳಾಸದಲ್ಲಿ ಎಷ್ಟು ವರ್ಷದಿಂದ ವಾಸಿಸಲಾಗುತ್ತಿದೆ. ಉದ್ಯೋಗ, ಮತ್ತು ವಿದ್ಯಾಭ್ಯಾಸದ ಬಗ್ಗೆ 14 ಪ್ರಶ್ನೆಗಳನ್ನು ಕೇಳಲಾಗಿತ್ತು. 

 ದೆಹಲಿ, ಉತ್ತರ ಪ್ರದೇಶ, ರಾಜಸ್ತಾನ, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್, ಕೇರಳ, ತಮಿಳುನಾಡು, ಕರ್ನಾಟಕ, ಮೇಘಾಲಯ, ಪಂಜಾಬ್ , ಹಿಮಾಚಲ ಪ್ರದೇಶ, ಗೋವಾ, ಮಹಾರಾಷ್ಟ್ರ ದಾದ್ರಾ ಮತ್ತು ನಾಗರ್ ಹವೇಲಿ ಮತ್ತಿತರ ಕಡೆಗಳಲ್ಲಿ ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲಿ ಎನ್ ಪಿಆರ್ ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. 

ಮುಂದಿನ ವರ್ಷ ನಡೆಸಲು ಉದ್ದೇಶಿಸಿಲಾಗಿರುವ 2020 ಎನ್ ಪಿಆರ್ ಹಾಗೂ 2010 ಎನ್ ಪಿಆರ್  ಫಾರಂನ್ನು ಕಾಂಗ್ರೆಸ್ ಮುಖಂಡ ಅಜಯ್ ಮಾಕೇನ್ ಟ್ವೀಟ್ ಮಾಡಿದ್ದು, ಮೋದಿ- ಶಾ ಅವರ ಎನ್ ಪಿಆರ್ ಭಿನ್ನವಾಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com