ಯುಪಿಯಲ್ಲಿ ಪ್ರತಿಭಟನಾಕಾರರು ಮಾಡಿದ್ದು ಸರಿಯೇ?: ಮೋದಿ ತಿರುಗೇಟು

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಉತ್ತರಪ್ರದೇಶದಲ್ಲಿ ನಡೆದ ಹಿಂಸಾಚಾರವನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ಲಕ್ನೋ : ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಉತ್ತರಪ್ರದೇಶದಲ್ಲಿ ನಡೆದ ಹಿಂಸಾಚಾರವನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. 

 ಕಾಯ್ದೆ ವಿರೋಧಿಸುವ ನೆಪದಲ್ಲಿ  ಪ್ರತಿಭಟನಾಕಾರರು ಸಾರ್ವಜನಿಕ ಕ  ಆಸ್ತಿಪಾಸ್ತಿಗೆ ಹಾನಿ ಮಾಡಿದ್ದು  ಸರಿಯೇ?   ಎಂದು ಆತ್ಮಾವಲೋಕನ  ಮಾಡುವ ಅವಶ್ಯಕತೆಯಿದೆ ಎಂದೂ  ಕೇಳಿದ್ದಾರೆ. 

ಲಕ್ನೋದ ಅಟಲ್ ಬಿಹಾರಿ ವೈದ್ಯಕೀಯ ವಿಶ್ವವಿದ್ಯಾಲಯದ ಶಂಕುಸ್ಥಾಪನೆ  ಸಮಾರಂಭದಲ್ಲಿ ಪ್ರಧಾನಿ ಮೋದಿ ಈ ಪ್ರಶ್ನೆ ಹಾಕಿದ್ದಾರೆ. ಪ್ರತಿಭಟನೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಮಾಡಿದವರು, ಮನೆಯಲ್ಲಿ ಕುಳಿತಾಗ ತಾವು ಮಾಡಿದ್ದು  ಸರಿಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಆಗ್ರಹ ಪಡಿಸಿದರು. 

ತಪ್ಪು ಮಾಹಿತಿ ಹರಡುವ ಪ್ರತಿಭಟನೆಗಳಿಂದ ಪ್ರಚೋದನೆಗೊಳಬೇಡಿ , ಸುಳ್ಳು ವದಂತಿಗಳಿಗೆ ಕಿವಿಗೂಡದಿರಿ ಎಂದು ದೇಶದ ಜನರಲ್ಲಿ ಅವರು ಮನವಿ ಮಾಡಿಕೊಂಡರು. ದೇಶದ  ಕಡೆಗೆ ಜನರ ಹಕ್ಕುಗಳನ್ನು ನೆನಪಿಸಿದ ಪ್ರಧಾನಿ, ನಮ್ಮ ಕರ್ತವ್ಯಗಳ ಬಗ್ಗೆ ಸಂವೇದನಾಶೀಲರಾಗಲು ಈಗ ಸಮಯ ಬಂದಿದೆ, ವಿಶೇಷವಾಗಿ, ನಾವು ಹೊಸ ದಶಕಕ್ಕೆ ಕಾಲಿಡುತ್ತಿರುವಾಗ ಮತ್ತು ನಮ್ಮ ಸ್ವಾತಂತ್ರ್ಯದ 75 ವರ್ಷಗಳನ್ನು ಕೆಲವೇ ವರ್ಷಗಳಲ್ಲಿ ಪೂರ್ಣಗೊಳಿಸಲಿದ್ದೇವೆ ”ಎಂದು  ಮೋದಿ ಹೇಳಿದರು.

'ಉತ್ತಮ ರಸ್ತೆಗಳು, ಸಾರಿಗೆ ಮತ್ತು ಒಳಚರಂಡಿ ನಮ್ಮ ಹಕ್ಕು ಗುಣಮಟ್ಟದ ಶಿಕ್ಷಣ  ನಮ್ಮ ಹಕ್ಕು ಆದರೆ ಶಿಕ್ಷಣ ಸಂಸ್ಥೆಗಳ ಮೌಲ್ಯ  ಮತ್ತು ಶಿಕ್ಷಕರನ್ನು ಅದೆ ರೀತಿ   ಪೊಲೀಸರ ಕೆಲಸವನ್ನು ಗೌರವಿಸುವುದು ನಾಗರಿಕರ ಕರ್ತವ್ಯ'ಎಂದು ಅವರು ತಿರುಗೇಟು ನೀಡಿದರು.

'ಸಂವಿದಾನದ 370 ನೆ  ವಿಧಿ ಮತ್ತು ರಾಮಮಂದಿರದ  ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ನಿರಾಶ್ರಿತರಿಗೆ ಪೌರತ್ವ ನೀಡುವ ಮಾರ್ಗವನ್ನು ತೆರವುಗೊಳಿಸಲಾಗಿದೆ. ನೂರ ಮೂವತ್ತು ಕೋಟಿ ಭಾರತೀಯರು ಇಂತಹ ಸವಾಲುಗಳಿಗೆ ಆತ್ಮವಿಶ್ವಾಸದಿಂದ ಪರಿಹಾರ ಕಂಡುಕೊಂಡಿದ್ದಾರೆ 'ಎಂದು ಅವರು ಹೇಳಿದರು.

ಇದೆ  11 ರಂದು ಸಂಸತ್ತು ಅಂಗೀಕರಿಸಿದ ಕಾನೂನನ್ನು ವಿರೋಧಿಸಿ ಉತ್ತರಪ್ರದೇಶದಾದ್ಯಂತ ಹದಿನೆಂಟು ಜನರು ಸಾವನ್ನಪ್ಪಿದ್ದಾರೆ. 

ಪ್ರತಿಭಟನಾ ವೇಳೆ ಪ್ರತಿಭಟನಾಕಾರರು ರಾಜ್ಯದ ಏಳು ಜಿಲ್ಲೆಗಳಲ್ಲಿ ಸುಮಾರು 100 ಕೋಟಿ ರೂಪಾಯಿಗಳ ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.ಇದು ಸರಿಯೆ? ಆತ್ಮವಲೋಕನ ಮಾಡಿಕೊಳ್ಳಲಿ ಎಂದು ಪ್ರತಿಭಟನಾನಿರತರಿಗೆ ನಯವಾಗಿಯೇ ಮೋದಿ  ಚಾಟಿ ಬೀಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com