ದೇಶದ ಆರ್ಥಿಕ ಸ್ಥಿತಿ ಸರಿಪಡಿಸದಿದ್ದರೆ ಬಿಜೆಪಿ ಮುಕ್ತ ಭಾರತ ಖಚಿತ: ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ

ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟ ಸ್ಥಿತಿಯಲ್ಲಿದ್ದು ಅದನ್ನು ಸರಿದಾರಿಗೆ ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಬಿಜೆಪಿ ಮುಕ್ತ ಭಾರತ ಎಂಬುದು ವಾಸ್ತವ ರೂಪಕ್ಕೆ ಬರುವ ಸಾಧ್ಯತೆಗಳು ಹೆಚ್ಚು ಎಂದು ಪಕ್ಷದ ಹಿರಿಯ ನಾಯಕ ರಾಜ್ಯಸಭಾ ಸದಸ್ಯ, ಡಾ. ಸುಬ್ರಮಣಿಯನ್ ಸ್ವಾಮಿ ಬಿಜೆಪಿ  ವರಿಷ್ಠರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ನರೇಂದ್ರ ಮೋದಿ-ಸುಬ್ರಮಣಿಯನ್ ಸ್ವಾಮಿ
ನರೇಂದ್ರ ಮೋದಿ-ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟ ಸ್ಥಿತಿಯಲ್ಲಿದ್ದು ಅದನ್ನು ಸರಿದಾರಿಗೆ ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಬಿಜೆಪಿ ಮುಕ್ತ ಭಾರತ ಎಂಬುದು ವಾಸ್ತವ ರೂಪಕ್ಕೆ ಬರುವ ಸಾಧ್ಯತೆಗಳು ಹೆಚ್ಚು ಎಂದು ಪಕ್ಷದ ಹಿರಿಯ ನಾಯಕ ರಾಜ್ಯಸಭಾ ಸದಸ್ಯ, ಡಾ. ಸುಬ್ರಮಣಿಯನ್ ಸ್ವಾಮಿ ಬಿಜೆಪಿ  ವರಿಷ್ಠರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
 
ದೇಶದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಂತೆ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಸಲಹೆ ನೀಡುತ್ತಿರುವವರ  ವಿರುದ್ದ ಡಾ. ಸ್ವಾಮಿ ಕೆಂಡ ಕಾರಿದ್ದಾರೆ. ಸಲಹೆಗಾರರು ಪ್ರಧಾನಿಯನ್ನು ಕತ್ತಲೆಯಲ್ಲಿರಿಸಿದ್ದಾರೆ. ಆರ್ಥಿಕತೆಯನ್ನು  ಸರಿಯಾದ ದಾರಿಯಲ್ಲಿ ಮುನ್ನಡೆಸಲು ಏನಾದರೂರೀಗ ಮಾಡದಿದ್ದರೆ. ಬಿಜೆಪಿ ಮುಕ್ತ ಭಾರತ ವಾಸ್ತವ ರೂಪದಲ್ಲಿ  ಎದುರಾಗಲಿದೆ ಎಂದು ಕಟು ಭವಿಷ್ಯ ನುಡಿದಿದ್ದಾರೆ.

ಪ್ರಧಾನಮಂತ್ರಿಗಳಿಗೆ ಸಲಹೆ ನೀಡುವವರು ಯಾರು? ಎಂಬುದು ತಮಗೆ ಗೊತ್ತಿಲ್ಲ. ಪ್ರಧಾನಿಗೆ ದೇಶದ ಆರ್ಥಿಕ ಸ್ಥಿತಿ ಗತಿಯ ಸತ್ಯವನ್ನು ಮಾತ್ರ ಅವರು ಹೇಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ  ಹೀನಾಯ  ಸೋಲು ಅನುಭವಿಸಿರುವ  ಹಿನ್ನೆಲೆಯಲ್ಲಿ  ಡಾ. ಸುಬ್ರಮಣಿಯನ್ ಸ್ವಾಮಿ ಈ ಎಚ್ಚರಿಕೆ ನೀಡಿದ್ದಾರೆ. 

ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿ ಜಾರ್ಖಂಡ್‌ನಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿ ವಿಫಲವಾಗಿದೆ. ಹರಿಯಾಣದಲ್ಲಿ ಜೆಜೆಪಿಯ ಬೆಂಬಲದಿಂದ ಬಿಜೆಪಿ ಸರ್ಕಾರ ರಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com