ಪೆರಿಯಾರ್ ಬಗ್ಗೆ ಟ್ವೀಟ್ ಡಿಲೀಟ್: ಬಿಜೆಪಿ ಎಡವಟ್ಟು! 

ತಮಿಳುನಾಡಿನ ಬಿಜೆಪಿ ಐಟಿ ಸೆಲ್ ಪೆರಿಯಾರ್ ಕುರಿತು ಮಾಡಿದ್ದ ಟ್ವೀಟ್ ನ್ನು ಡಿಲೀಟ್ ಮಾಡಿ, ಎಡವಟ್ಟು ಮಾಡಿಕೊಂಡಿದೆ. 
ಪೆರಿಯಾರ್ ಬಗ್ಗೆ ಟ್ವೀಟ್ ಡಿಲೀಟ್: ಯಡವಟ್ಟುಮಾಡಿಕೊಂಡ ಬಿಜೆಪಿ!
ಪೆರಿಯಾರ್ ಬಗ್ಗೆ ಟ್ವೀಟ್ ಡಿಲೀಟ್: ಯಡವಟ್ಟುಮಾಡಿಕೊಂಡ ಬಿಜೆಪಿ!
Updated on

ತಮಿಳುನಾಡಿನ ಬಿಜೆಪಿ ಐಟಿ ಸೆಲ್ ಪೆರಿಯಾರ್ ಕುರಿತು ಮಾಡಿದ್ದ ಟ್ವೀಟ್ ನ್ನು ಡಿಲೀಟ್ ಮಾಡಿ, ಎಡವಟ್ಟು ಮಾಡಿಕೊಂಡಿದೆ. 

ಡಿ.25 ರಂದು ಪೆರಿಯಾರ್ ಎಂದೇ ಖ್ಯಾತರಾಗಿದ್ದ ದ್ರಾವಿಡ ನಾಯಕ ಇವಿ ರಾಮಸ್ವಾಮಿ ಅವರು ನಿಧನ ಹೊಂದಿದ ದಿನ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ರಾಜಕೀಯ ಪಕ್ಷಗಳು ಪೆರಿಯಾರ್ ಗೆ ಶ್ರದ್ಧಾಂಜಲಿ ಸಲ್ಲಿಸುತ್ತಿವೆ. ಆದರೆ ಬಿಜೆಪಿ ಮಾತ್ರ ಪೆರಿಯಾರ್ ಕುರಿತು ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡಿದೆ. 

ಇಂದು ಮಣಿಯಮ್ಮಾಯಿ ಅವರ ತಂದೆ ಪೆರಿಯಾರ್ ಅವರ ಪುಣ್ಯಸ್ಮರಣೆಯ ದಿನ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಗಲ್ಲು ಶಿಕ್ಷೆಗೆ ಬೆಂಬಲ ನೀಡೋಣ, ಹಾಗೂ ಪೋಸ್ಕೋ ಆರೋಪಿ ಮುಕ್ತ ಸಮಾಜಕ್ಕಾಗಿ ಪ್ರತಿಜ್ಞೆ ಕೈಗೊಳ್ಳೋಣ ಎಂದು ಬಿಜೆಪಿ ಟ್ವೀಟ್ ಮಾಡಿತ್ತು. 

ಈ ಟ್ವೀಟ್ ಗೆ ತಮಿಳುನಾಡಿನ ರಾಜಕೀಯ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ಕ್ಷಮೆಗೆ ಆಗ್ರಹಿಸಿವೆ. ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಬಿಜೆಪಿ ಟ್ವೀಟ್ ಡಿಲೀಟ್ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com