ಉತ್ತಮ ಆಡಳಿತ ಸೂಚ್ಯಂಕ: ಮೊದಲ ಸ್ಥಾನದಲ್ಲಿ ತಮಿಳುನಾಡು, ಎರಡು-ಮೂರನೇ ಸ್ಥಾನ ಯಾರಿಗೆ? ಇಲ್ಲಿದೆ ವಿವರ 

ಉತ್ತಮ ಆಡಳಿತ ಸೂಚ್ಯಂಕದಲ್ಲಿ ತಮಿಳುನಾಡು ಮೊದಲ ಸ್ಥಾನ ಪಡೆದಿದ್ದರೆ, ನಂತರದ ಎರಡು ಸ್ಥಾನಗಳಲ್ಲಿ ಅನುಕ್ರಮವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಿವೆ. 
ಉತ್ತಮ ಆಡಳಿತ ಸೂಚ್ಯಂಕ: ಮೊದಲ ಸ್ಥಾನದಲ್ಲಿ ತಮಿಳುನಾಡು, ಎರಡು-ಮೂರನೇ ಸ್ಥಾನ ಯಾರಿಗೆ? ಇಲ್ಲಿದೆ ವಿವರ
ಉತ್ತಮ ಆಡಳಿತ ಸೂಚ್ಯಂಕ: ಮೊದಲ ಸ್ಥಾನದಲ್ಲಿ ತಮಿಳುನಾಡು, ಎರಡು-ಮೂರನೇ ಸ್ಥಾನ ಯಾರಿಗೆ? ಇಲ್ಲಿದೆ ವಿವರ

ನವದೆಹಲಿ: ಉತ್ತಮ ಆಡಳಿತ ಸೂಚ್ಯಂಕದಲ್ಲಿ ತಮಿಳುನಾಡು ಮೊದಲ ಸ್ಥಾನ ಪಡೆದಿದ್ದರೆ, ನಂತರದ ಎರಡು ಸ್ಥಾನಗಳಲ್ಲಿ ಅನುಕ್ರಮವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಿವೆ. 

ದೊಡ್ಡ ರಾಜ್ಯಗಳು, ಈಶಾನ್ಯ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಹಿಲ್ ಸ್ಟೇಟ್ಸ್ ಗಳನ್ನಾಗಿ ವಿಂಗಡಣೆ  ಮಾಡಲಾಗಿದ್ದು, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಮೊದಲ 4 ಸ್ಥಾನಗಳಲ್ಲಿ ಸ್ಥಾನಪಡೆದುಕೊಂಡಿವೆ 

ಚತ್ತೀಸ್ ಗಢ 4 ನೇ ಸ್ಥಾನದಲ್ಲಿದ್ದು, ಆಂಧ್ರಪ್ರದೇಶ-5, ಗುಜರಾತ್-6, ಹರ್ಯಾಣ 7  ಹಾಗೂ ಕೇರಳ 8 ನೇ ಸ್ಥಾನಗಳಲ್ಲಿವೆ ಎಂದು ಸಿಬ್ಬಂದಿ ಸಚಿವಾಲಯ ಮಾಹಿತಿ ನೀಡಿದೆ. 
 
ದೊಡ್ಡ ರಾಜ್ಯಗಳ ವಿಭಾಗದಲ್ಲಿ ಮಧ್ಯಪ್ರದೇಶ 9 ನೇ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಅನುಕ್ರಮವಾಗಿ ಪಶ್ಚಿಮ ಬಂಗಾಳ-10, ತೆಲಂಗಾಣ-11, ರಾಜಸ್ಥಾನ-12, ಪಂಬಾಜ್-13, ಒಡಿಶಾ-14, ಬಿಹಾರ-15, ಗೋವಾ-16, ಉತ್ತರಪ್ರದೇಶ-17, ಜಾರ್ಖಂಡ್ 18 ನೇ ಸ್ಥಾನಗಳಲ್ಲಿದೆ. 

ಈಶಾನ್ಯ ಹಾಗೂ ಹಿಲ್ ಸ್ಟೇಟ್ಸ್ ನ ವಿಭಾಗದಲ್ಲಿ ಅನುಕ್ರಮವಾಗಿ ಹಿಮಾಚಲ ಪ್ರದೇಶ ನಂ.1 ಸ್ಥಾನದಲ್ಲಿದ್ದರೆ, ಉತ್ತರಾಖಂಡ್ 2 ನೇ ಸ್ಥಾನ, ನಂತರದ ಸ್ಥಾನಗಳಲ್ಲಿ ತ್ರಿಪುರ, ಮಿಜೋರಾಮ್, ಸಿಕ್ಕಿಂ, ಅಸ್ಸಾಂ, ಜಮ್ಮು-ಕಾಶ್ಮೀರ (ಜಮ್ಮು-ಕಾಶ್ಮೀರ, ಲಡಾಖ್) ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶಗಳಿವೆ. ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯ ಪೈಕಿ ಮೊದಲ ಸ್ಥಾನದಲ್ಲಿ ಪಾಂಡಿಚೆರಿ, ನಂತರದ ಸ್ಥಾನಗಳಲ್ಲಿ ಚಂಡೀಗಢ, ದೆಹಲಿ, ದಾಮನ್, ಡಿಯು, ಅಂಡಮಾನ್, ನಿಕೋಬಾರ್ ದ್ವೀಪ, ದಾದ್ರಾ, ನಗರ್ ಹವೇಲಿ, ಲಕ್ಷ ದ್ವೀಪಗಳಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com