ಚೆನ್ನೈ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಕ್ರಮವಾಗಿ ವಿದೇಶಕ್ಕೆ ಸಾಗಿಸಲಾಗುತ್ತಿದ್ದ ಒಂದು ತಿಂಗಳ ಚಿರತೆ ಮರಿಯನ್ನು ಕಸ್ಟಮ್ ಅಧಿಕಾರಿಗಳು ಇಂದು ರಕ್ಷಣೆ ಮಾಡಿದ್ದಾರೆ.
ಪ್ರಯಾಣಿಕರ ಬ್ಯಾಗಿನಲ್ಲಿಟ್ಟು ಈ ಚಿರತೆ ಮರಿಯನ್ನು ಚೆನ್ನೈ ವಿಮಾನ ನಿಲ್ದಾಣದಿಂದ ಥೈಲ್ಯಾಂಡ್ ಗೆ ಅಕ್ರಮವಾಗಿ ಸಾಗಿಸಲಾಗುತಿತ್ತು. ಬ್ಯಾಗ್ ನಿಂದ ಶಬ್ದ ಬರುತ್ತಿದುದ್ದನ್ನು ಗಮನಿಸಿದ ಏರ್ ಪೋರ್ಟ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಚಿರತೆ ಮರಿ ಪತ್ತೆಯಾಗಿದೆ.
ನಂತರ ಆ ಚಿರತೆ ಮರಿಯನ್ನು ರಕ್ಷಿಸಿ ಅರಿಂಗಾರ್ ನ ಪ್ರಾಣಿ ಸಂಗ್ರಹಾಲಯಕ್ಕೆ ಕರೆದೊಯ್ಯಲಾಗಿದೆ. ಚಿರತೆ ಮರಿಯನ್ನು ಸಾಗಿಸುತ್ತಿದ್ದ ಪ್ರಯಾಣಿಕನನ್ನು ತಮಿಳುನಾಡು ಅರಣ್ಯ ಇಲಾಖೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆದಿದೆ.
Advertisement